ಬೆಳಗಾವಿ- ಬೆಳಗಾವಿ ತಹಶೀಲ್ದಾರ್ ಕಚೇರಿಯ FDC ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಕುರಿತು ಬೆಳಗಾವಿಯ ಖಡೇಬಝಾರ್ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಮೂವರು ಜನ ಆರೋಪಿಗಳು ತಮ್ಮ ಮೋಬೈಲ್ ಗಳನ್ನು ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು ಪೋಲೀಸರು ಶೋಧಕಾರ್ಯವನ್ನು ಆರಂಭಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ರುದ್ರಣ್ಣನ ತಾಯಿ ಕೊಟ್ಟ ದೂರಿನ ಮೇರೆಗೆ ಖಡೇಬಝಾರ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದು ಆತ್ಮಹತ್ಯೆಗೆ ಕಾರಣರಾದ ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ್ ,ಅಶೋಕ್ ಕಬ್ಬಲೀಗಾರ್ , ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಿಎ ಸೋಮು ಈ ಮೂವರು ಜನ ಆರೋಪಿಗಳು ಪರಾರಿಯಾಗಿದ್ದು ಪೋಲೀಸರು ಶೋಧಕಾರ್ಯಾಚರಣೆ ಆರಂಭಿದಿದ್ದಾರೆ.
ರುದ್ರಣ್ಣ ಆತ್ಮಹತ್ಯೆಗೆ ಮುನ್ನ ಯಾರ ಜೊತೆ ಮಾತಾಡಿದ್ರು, ರುದ್ರಣ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಮೆಸ್ಸೇಜ್ ಗಳನ್ನು ಆಧರಿಸಿ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಯ ದಿನ ಕಚೇರಿಯಲ್ಲೇ ಇದ್ದ ತಹಶೀಲ್ದಾರ್ ಬಸವರಾಜ್ ನಾಗರಾಳ್ ಪರಾರಿಯಾಗಿದ್ದು ಅಚ್ಚರಿಯ ಸಂಗತಿಯಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಿಎ ಸೋಮು ಮತ್ತು ಅಶೋಕ್ ಕಬ್ಬಲೀಗಾರ್ ಎ2 ಮತ್ತು ಎ3 ಆರೋಪಿಗಳಾಗಿದ್ದು ತಹಶೀಲ್ದಾರ್ ಬಸವರಾಜ್ ನಾಗರಾಳ್ ಎ1 ಆರೋಪಿಯಾಗಿದ್ದು ರುದ್ರಣ್ಣನಿಗೆ ಈ ಮೂವರು ಕಿರುಕಳ ನೀಡಿದ ಕಾರಣ ಲಕ್ಷ್ಮೀ ಹೆಬ್ಬಾಳಕರ್ ಪಿಎ ಸೋಮು ರುದ್ರಣ್ಣನಿಂದ ಎರಡು ಲಕ್ಷ ರೂ ಹಣ ಪಡೆದು ಆತನ ವರ್ಗಾವಣೆಯನ್ನು ತಡೆಯದೇ ಆತನ ಬೇಡಿಕೆಯಂತೆ ವಿಭಾಗದ ಜವಾಬ್ದಾರಿಯನ್ನು ಕೊಡದೇ ಆತನ ವರ್ಗಾವಣೆ ಮಾಡಿದ್ದರಿಂದ ರುದ್ರಣ್ಣ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಿಜೆಪಿ ನಾಯಕರು ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ, ಲಕ್ಷ್ಮೀ ಹೆಬ್ಬಾಳಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ರುದ್ರಣ್ಣ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ ಕಾರಣ, ತನಿಖೆ ಚುರುಕುಗೊಂಡಿದೆ