ಬೆಳಗಾವಿ-ರಾಜ್ಯ ಸರಕಾರ 176 ತಾಲೂಕುಗಳಲ್ಲಿ ಆಯುಷ್ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದೆ ಎಂದು ಬೃಹತ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ
ಬೆಳಗಾವಿಯಲ್ಲಿ ಎ.ಎಂ ಶೇಖ ಶಿಕ್ಷಣ ಸಮೂಹದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ವೈದ್ಯಕೀಯ ಕ್ಷೇತ್ರಕ್ಕೆ ಇವತ್ತು ಬಹಳ ಬೇಡಿಕೆ ಇದೆ. ವೈದ್ಯಕೀಯ ಸಂಶೋಧನೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿರಬಹುದು. ಆದರೆ, ಆರೋಗ್ಯವೇ ಕೊನೆಯವರೆಗೆ ಬದುಕು ನೀಡುತ್ತದೆ ಎಂದು ಸಚಿವರು ಹೇಳಿದರು
ನಾವು ಬದುಕಿರುವವರೆಗೂ ಆರೋಗ್ಯವಾಗಿರಬೇಕು. ಸಾತ್ವಿಕ ಆಹಾರ ಸಿಗಬೇಕು. ಹಾಗಾಗಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ ರಾಜ್ಯದ 1.40ಲಕ್ಷ ಬಡ ಕುಟುಂಬಗಳಲ್ಲಿ 1.25 ಲಕ್ಷ ಆರೋಗ್ಯ ಕಾರ್ಡ ವಿತರಣೆ ಮಾಡಲಾಗಿದೆ ಎಂದರು
50 ವರ್ಷದ ಹಿಂದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶೇಖ್ ಅವರು ಶಿಕ್ಷಣದ ಬಗ್ಗೆ ಚಿಂತನೆ ನಡೆಸಿದ್ದೇ ಅದ್ಬುತವಾದದ್ದು ಹೊಮಿಯೋಪಥಿ ಭಾರೀ ಬೇಡಿಕೆ ಪಡೆದ ಕ್ಷೇತ್ರವಾಗಿದೆ ಈ ಕ್ಷೇತ್ರದಲ್ಲಿ ಶೇಖ ಶಿಕ್ಷಣ ಸಂಸ್ಥೆ ತೊಡಗಿಸಿಕೊಂಡಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಆರ್ ವಿ ದೇಶಪಾಂಡೆ ಹೇಳಿದರು
ಸಂಸ್ಥೆಗಳು ಸಾವಿರಾರು ವರ್ಷ ಬಾಳಬೇಕಾಗುತ್ತದೆ. 50 ವರ್ಷ ದೊಡ್ಡದಲ್ಲ. ಆದರೆ 50 ವರ್ಷ ಹೇಗೆ ನಡೆದುಬಂದಿದೆ ಎಂಬುದು ಮುಖ್ಯ ಎಂದರು
ವಿಶ್ವದಲ್ಲಿ ಕರ್ನಾಟಕ ತಾಂತ್ರಿಕ ಕ್ಷೇತ್ರದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಕರ್ನಾಟಕ ತಾಂತ್ರಿಕ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಬರುತ್ತವೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು
ಭಾರತ 2025ರಲ್ಲಿ ಹೆಚ್ಚು ಯುವಕರನ್ನು ಹೊಂದಿದ್ದ ರಾಜ್ಯವಾಗುತ್ತದೆ ಪ್ರತಿವರ್ಷ ಕೇಂದ್ರ ಸರಕಾರ 2000 ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದಿದ್ದರು. ಆದರೆ ಕರ್ನಾಟಕದಲ್ಲಿ 2019ರಲ್ಲಿ 50 ಲಕ್ಷ ಕೊಡುತ್ತೇವೆ. ಆದರೆ ಕೌಶಾಲ್ಯಭಿವೃದ್ಧಿಯಲ್ಲಿ 2ಕೋಟಿ ಅಂದಿದ್ರು ಎಲ್ಲಿದೆ. ಎಂದು ಪರೋಕ್ಷವಾಗಿ ಕೇಂದ್ರ ಸರಕಾರದ ವಿರುದ್ಧ ಸಚಿವ ದೇಶಪಾಂಡೆ ವಾಗ್ದಾಳಿ ನಡೆಸಿದರು
ಅನಂತಕುಮಾರ್ ಹೆಗಡೆಗೆ ಟಾಂಗ್
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಚೋದನೆ ಹೇಳಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ
ಅವರು ಏನೂ ಹೇಳಿಕೆ ನೀಡುತ್ತಾರೋ ಅದು ಅವರಿಗೆ ತಿಳಿಯುತ್ತಿಲ್ಲ
ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ಸಿಕ್ಕಿರುವುದು ಒಳ್ಳೆಯದಿದ್ದೆ ಆ ಅವಕಾಶ ಸದುಪಯೋಗ ಪಡೆಸಿ ಅಭಿವೃದ್ಧಿ ಪಡೆಸುವ ಕಾರ್ಯಮಾಡಬೇಕು ಅದನ್ನ ಬಿಟ್ಟು ಪ್ರಚೋದನ ಹೇಳಿಕೆಯಿಂದ ಅಭಿವೃದ್ಧಿ ಅಸಾಧ್ಯ ಅವರ ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಗಡೆ ವಿರುದ್ಧ ಹರಿಹಾಯ್ದರು.