20 ರಂದು ಸಿಎಂ ಸಿದ್ರಾಮಯ್ಯ ಬೆಳಗಾವಿ CBT ಬಸ್ ನಲ್ಲಿ ಪ್ರಯಾಣ ಮಾಡ್ತಾರಂತೆ

 

ಬೆಳಗಾವಿ- ರಾಜ್ಯ ಸಾರಿಗೆ ಇಲಾಖೆ ಇದೇ ತಿಂಗಳು 20 ರಂದು ಸೋಮವಾರ ರಾಜ್ಯದಾದ್ಯಂತ ಬಸ್ ಡೇ ಆಚರಣೆ ಮಾಡುತ್ತಿದೆ ಅಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಸಿಬಿಟಿ ಬಸ್ ನಲ್ಲಿ ಸುವರ್ಣ ಸೌಧಕ್ಕೆ ಪ್ರಯಾಣ ಮಾಡುವ ಮೂಲಕ ಬಸ್ ಡೇ ಗೆ ಚಾಲನೆ ನೀಡಲಿದ್ದಾರೆ
ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಸಾರಿಗೆ ನಿಗಮದ ಅಧ್ಯಕ್ಷ ಡಂಗನವರ ಅವರ ನೇತ್ರತ್ವದಲ್ಲಿ ಬಸ್ ಡೇ ಕುರಿತು ಜನಜಾಗೃತಿ ಮೂಡಿಸಲಾಯಿತು
ಬೈಕ್ ಸವಾರರಿಗೆ ಬಿತ್ತಿಪತ್ರ ಹಂಚುವ ಮೂಲಕ ವಾರದಲ್ಲಿ ಒಂದು ದಿನ ಬಸ್ ಪ್ರಯಾಣ ಮಾಡಿ ಎಂದು ಮನವಿ ಮಾಡಿಕೊಳ್ಳಲಾಯಿತು
ಈ ಸಂಧರ್ಭದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಡಂಗಣವರ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ ದೆಹಲಿ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು ವಾರದಲ್ಲಿ ಒಂದು ದಿನ ಬೈಕ್ ಹಾಗು ಕಾರುಗಳನ್ನು ಮನೆಯಲ್ಲಿಟ್ಟು ಬಸ್ ಪ್ರಯಾಣ ಮಾಡುವ ಮೂಲಕ ಪರಿಸರ ಸಂರಕ್ಷಣೆ ಯಲ್ಲಿ ಕೈಜೋಡಿಸಬೇಕು ಎಂದು ಡಂಗಣವರ ಮನವಿ ಮಾಡಿಕೊಂಡರು ಕಾಂಗ್ರೆಸ್
ಜಿಲ್ಲಾಧ್ಯಕ್ಷ ವಿನಯ ನಾಲಗಟ್ಟಿ ಮಾತನಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುತ್ತಿದೆ ಬೆಳಗಾವಿಯಲ್ಲಿ ಬಸ್ ಗಳ ಓಡಾಟ ನಗರ ಹಾಗು ಜಿಲ್ಲೆಯಲ್ಲಿ ಉತ್ತಮವಾಗಿದೆ ಜಿಲ್ಲೆಯ ಜನ ಒಂದು ದಿನ ಬಸ್ ಪ್ರಯಾಣ ಮಾಡುವ ಮೂಲಕ ಸಾರಿಗೆ ಇಲಾಖೆಯ ಬಸ್ ಡೇ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡರು
ಸಲೀಂ ಖತೀಬ,ರಾಜಾ ಸಲೀಂ ಕಾಶಿಮನವರ ಬಸವರಾಜ ಶೇಗಾವಿ ಮತ್ತಿತರರು ಭಾಗವಹಿಸಿದ್ದರು

 

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *