ಸಾಂಬ್ರಾ ವಿಮಾನ ‌ನಿಲ್ದಾಣದಲ್ಲಿ ಒಂದೂವರೆ ಲಕ್ಷ ‌ಹಣ ಸೀಜ್!

ಬೆಳಗಾವಿ- ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಂದೂವರೆ ಲಕ್ಷ ರೂ ಹಣವನ್ನು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೀಜ್ ಮಾಡಿಲಾಗಿದೆ.

ಏರ್ಪೋರ್ಟ್ ಸಿಬ್ಬಂದಿ ತಪಾಸಣೆ ವೇಳೆ ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ಏರ್ಪೋರ್ಟ್ ಸಿಬ್ಬಂದಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಚುನಾವಣೆ ಸಿಬ್ಬಂದಿಯ ಪರಿಶೀಲನೆ ವೇಳೆ ಎರಡು ಲಕ್ಷ ಹಣ ಸಾಗಿಸುತ್ತಿರುವುದು ದೃಢವಾಗಿದೆ. ಬೆಳಗಾವಿ ಸಾಂಬ್ರಾ ‌ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುತ್ತಿದ್ದ ಜಸ್ವಿರ್ ಸಿಂಗ್ 2ಲಕ್ಷ ಹಣ ಸಾಗಿಸುತ್ತಿದ್ದರು. ವಿಮಾನದಲ್ಲಿ 50ಸಾವಿರ ಸಾಗಾಟ ಮಾಡಲು ಮಾತ್ರ ಅವಕಾಶ ಇರುವ ಹಿನ್ನೆಲೆಯಲ್ಲಿ ಒಂದೂವರೆ ಲಕ್ಷ ಹಣ ಸೀಜ್ ಮಾಡಿ ಇನ್ನುಳಿದ 50 ಸಾವಿರ ಹಣ ಮರಳಿಸಲಾಗಿದೆ ಚುನಾವಣೆ ಫ್ಲೈಯಿಂಗ್‌ ಸ್ಕ್ವಾಡ್ ನೇತೃತ್ವದ ತಂಡದಿಂದ ಹಣ ಸೀಜ್ ಮಾಡಲಾಗಿದೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *