ಬೆಳಗಾವಿ-ಏರ್ ಪೋರ್ಟ್ ಅಥೋರಿಟಿ ಆಫ್ ಇಂಡಿಯಾ ದೇಶದಲ್ಲಿ ಆರು ಪೈಲಟ್ ಟ್ರೇನಿಂಗ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು,ಬೆಳಗಾವಿ,ಮತ್ತು ಗುಲ್ಬರ್ಗಾದಲ್ಲಿ ಫ್ಲಾಯಿಂಗ್ ಸ್ಕೂಲ್ ಅಂದ್ರೆ ಪೈಲಟ್ ಟ್ರೇನಿಂಗ್ ಶಾಲೆ ಶುರುವಾಗಲಿದೆ.
ಏರ್ ಪೋರ್ಟ್ ಅಥೋರಿಟಿ ಆಪ್ ಇಂಡಿಯಾ ಚೇರಮನ್, ಅರವಿಂದ ಸಿಂಗ್ ಅವರು ದೇಶದ ಆರು ವಿಮಾನ ನಿಲ್ಧಾಣಗಳಲ್ಲಿ ಫ್ಲಾಯಿಂಗ್ ಸ್ಕೂಲ್ ಗಳನ್ನು ಆರಂಭಿಸುವದಾಗಿ ಘೋಷಣೆ ಮಾಡಿದ್ದಾರೆ.
ಅವರು ಆಯ್ಕೆ ಮಾಡಿರುವ ಆರು ನಗರಗಳಲ್ಲಿ ಕರ್ನಾಟಕದ ಬೆಳಗಾವಿ,ಮತ್ತು ಕಲ್ಬುರ್ಗಿ ನಗರಗಳು ಇವೆ,
ಏರ್ ಪೋರ್ಟ್ ಅಥೋರಿಟಿ ಆಫ್ ಇಂಡಿಯಾ ಖಾಸಗಿ ಕಂಪನಿಗಳಿಗೆ ಫ್ಲಾಯಿಂಗ್ ಸ್ಕೂಲ್ ಗಳನ್ನು ನಡೆಸಲು ಅನುಮತಿ ನೀಡಲಿದೆ,ಇದಕ್ಕೆ ಒಂದು ರೂಪಾಯಿಯನ್ನು ಏರ್ ಪೋರ್ಟ್ ಅಥೋರಿಟಿ ಖರ್ಚು ಮಾಡುತ್ತಿಲ್ಲ,ಪ್ಲಾಯಿಂಗ್ ಸ್ಕೂಲ್ ಗಳನ್ನು ನಡೆಸುವ ಕಂಪನಿಗಳು ವಿಮಾನ ನಿಲ್ಧಾಣಗಳನ್ನು ಬಳಿಸಿಕೊಳ್ಳುವ ಭಾಡಿಗೆ ಭರಿಸಬೇಕಾಗುತ್ತದೆ.ಈ ಯೋಜನೆಯಿಂದ ಏರ್ ಪೋರ್ಟ್ ಅಥೋರಿಟಿ ಆಫ್ ಇಂಡಿಯಾಗೆ ಆದಾಯ ಬರಲಿದೆ.
ಎಲ್ಲಿ ಏರ್ ಟ್ರಾಫಿಕ್ ಕಡಿಮೆ ಇದೆಯೋ ಅಂತಹ ನಗರಗಳನ್ನು ಆಯ್ಕೆ ಮಾಡಲಾಗಿದೆ. ದೇಶದಲ್ಲಿ ಯುವ ಪೈಲೆಟ್ ಗಳ ಕೊರತೆ ಇದ್ದು ಏರ್ ಲೈನ್ಸ್ ಕಂಪನಿಗಳು ನಿವೃತ್ತಿ ಹೊಂದಿದ ಪೈಲಟ್ ಗಳನ್ನು ಬಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು ಹೊಸ ಪೈಲಟ್ ಗಳಿಗೆ ಉತ್ತೇಜನ ನೀಡಲು ಯುವ ಪೈಲಟ್ ಗಳನ್ನು ಲಭ್ಯಗೊಳಿಸುವ ನಿಟ್ಟಿನಲ್ಲಿ ಏರ್ ಫೋರ್ಟ್ ಅಥೋರಿಟಿ ಆಫ್ ಇಂಡಿಯಾ ಆರು ಫ್ಲಾಯಿಂಗ್ ಸ್ಕೂಲ್ ಅಂದ್ರೆ ಪೈಲಟ್ ಟ್ರೇನಿಂಗ್ ಶಾಲೆಗಳನ್ನು ಆರಂಭಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದು ಆರು ನಗರಗಳ ಪಟ್ಟಿಯಲ್ಲಿ ಬೆಳಗಾವಿ ಮಹಾನಗರದ ಸಾಂಬ್ರಾ ಏರ್ ಪೋರ್ಟ್ ಸೇರಿರುವದು ಸಂತಸದ ಸಂಗತಿಯಾಗಿದೆ.