Breaking News

ಸನದಿ ಸಾಹಿತ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ

ಬೆಳಗಾವಿ:
ಬೆಳಗಾವಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಮಟ್ಟದ ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’ಗೆ 2019 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಸ್ವರಚಿತ ಕವನ ಸಂಕಲನಗಳನ್ನು ಆಹ್ವಾನಿಸಿದೆ. ಕವನ ಸಂಕಲನ ಕನಿಷ್ಟ 50 ಪುಟ ಹೊಂದಿದ್ದು, ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಿರಬೇಕು. ಈ ಪ್ರಶಸ್ತಿ ಉದಯೋನ್ಮೂಖ ಬರಹಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ನೀಡುತ್ತಿರುವದರಿಂದ 35 ವರ್ಷ ಒಳಗಿರುವವರು ಕೃತಿ ಕಳಿಸಬೇಕು.
ಪ್ರಶಸ್ತಿ 5000 /ರೂ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಆಸಕ್ತ ಕವಿಗಳು ತಮ್ಮ ಕೃತಿಯ ಮೂರು ಪ್ರತಿಗಳನ್ನು ವಯಸ್ಸಿನ ದಾಖಲೆ, ದೂರವಾಣಿ ಇತ್ಯಾದಿ ವಿವರಗಳನ್ನು ಮೋಹನ ಕಳಸದ “ಶ್ರಮಶ್ರೀ” ಶಿಕ್ಷಕರ ಬಡಾವಣೆ ಖಾಸಬಾಗ, ಬೆಳಗಾವಿ, ಮೊಬೈಲ್ ನಂ ;9845921947 ಈ ವಿಳಾಸಕ್ಕೆ ಸೆ 30 ರೊಳಗೆ ಕಳಿಸಬೇಕೆಂದು ಕಾರ್ಯಾಧ್ಯಕ್ಷ ಡಾ. ರಾಮಕೃಷ್ಣ ಮರಾಠೆ ಅವರು ಪ್ರಕಟ ಣೆಯೊಂದರಲ್ಲಿ ತಿಳಿಸಿದ್ದಾರೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *