ಬೆಳಗಾವಿ- ಕಿತ್ತೂರು ಉತ್ಸವಕ್ಕೆ ಚನ್ನಮ್ಮಾಜಿಯ ಭಕ್ತ ಸಾಗರವೇ ಹರಿದು ಬರುತ್ತಿದೆ ಚನ್ನಮ್ಮಾಜಿ ಸಂಸ್ಥಾನದ ಖಡ್ಗ ಇತ್ಯಾದಿಗಳನ್ನು ನೋಡಲು ಬಂದವರಿಗೆ ತೀವ್ರ ನಿರಾಸೆಯಾಗಿದೆ.
ಉತ್ಸವದ ಸಂದರ್ಭದಲ್ಲೂ ಕಿತ್ತೂರಿನ ಮ್ಯೂಸಿಯಂ ಗೆ ದೊಡ್ಡ ಬೀಗ ಹಾಕಲಾಗಿದೆ. ಮ್ಯೂಸಿಯಂನ ದ್ವಾರಬಾಗಿಲಲ್ಲಿ ಎರಡು ಮುಸುಕುಧಾರಿ ಮೂರ್ತಿಗಳಿವೆ ಕಿತ್ತೂರಿನಲ್ಲಿ ಕ್ರಾಂತಿ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗು ಅಮಟೂರ ಬಾಳಪ್ಪನವರ ಮೂರ್ತಿಗಳು ಕಳೆದ ಒಂದೂವರೆ ವರ್ಷದಿಂದ ಮುಸುಕಿನಲ್ಲಿವೆ ಮೂರ್ತಿಗಳು ರೆಡಿ..ಮುಸುಕು ತೆಗೆದು ಬಿಡಿ ಅಂತ ರಾಯಣ್ಣನ ಅಭಮಾನಿಗಳು ಅಮಟೂರ ಬಾಳಪ್ಪನ ಅಭಿಮಾನಿಗಳು ಒತ್ತಯಿಸಿದ್ದಾರೆ
ವೀರ ರಾಣಿಯ ನೆಲದಲ್ಲಿ ರಾಯಣ್ಣನ,ಅಮಟೂರ ಬಾಳಪ್ಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕೆಂದು ಕಿತ್ತೂರಿನ ಜನ ಕಳೆದ ಎರಡು ದಶಕಗಳಿಂದ ಒತ್ತಯಿಸುತ್ತಲೇ ಬಂದಿದ್ದಾರೆ ಕಿತ್ತೂರ ಅಭಿವೃದ್ಧಿ ಪಾಧಿಕಾರದಿದಂದ ೧೪ ಲಕ್ಷ ರೂ ಖರ್ಚು ಮಾಡಿ ಕೊಲ್ಲಾಪೂರದಲ್ಲಿ ಮೂರ್ತಿಗಳನ್ನು ರೆಡಿ ಮಾಡಿ ಆ ಮೂರ್ತಿಗಳನ್ನು ಕಿತ್ತೂರಿನ ಮ್ಯುಜಿಯಂ ನಲ್ಲಿ ಮುಸುಕು ಹಾಕಿ ಇಟ್ಟು ಬರೋಬ್ಬರಿ ಒಂದೂವರೆ ವರ್ಷ ಕಳೆದಿದೆ ಅಧಿಕಾರಿಗಳು ಇನ್ನುವರೆಗೆ ಇವುಗಳನ್ನು ಅನಾವರಣ ಮಾಡದೇ ಕಾಲಹರಣ ಮಾಡುತ್ತಿರುವದು ದುರ್ದೈವದ ಸಂಗತಿ
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಮಟೂರ ಬಾಳಪ್ಪನವರ ಮೂರ್ತಿಗಳು ಅನಾವರಣದ ವಿಷಯದಲ್ಲಿ ಕಿತ್ತೂರಿನಲ್ಲಿಯೇ ಈ ರೀತಿಯ ನಿರ್ಲಕ್ಷ್ಯ ಬೇಸರ ತಂದಿದೆ