ಬೆಳಗಾವಿ- ಸ್ವಾತಂತ್ಯ ಸಂಗ್ರಾಮದ ಬೆಳ್ಳಿಚುಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಇತಿಹಾಸದಲ್ಲಿ ಹೊಸ ಸಂಶೋದನೆಯಾಗಿ ಹೊಸ ದಾಖಲೆಗಳು ಲಭಿಸಿವೆ
ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅವಿವಾಹಿತನಲ್ಲಾ ಅವನಿಗೆ ಮದುವೆಯಾಗಿತ್ತು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.
ಹೌದು ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಬಂಟ ಸ್ವಾತಂತ್ರಹೋರಾಟಗರಾ ಸಂಗೊಳ್ಳಿ ರಾಯಣ್ಣನಿಗೆ ಹೆಂಡತಿ ಮಕ್ಳಳು ಸಹ ಇದ್ದರೆಂಬ ದಾಖಲೆಗಳು ಸಿಕ್ಕಿದ್ದು ರಾಯಣ್ಣನಿಗೆ ಒಬ್ಬ ಮಗನಿದ್ದ ಎಂದು ತಿಈದು ಬಂದಿದೆ. ರೇತವ್ವಾ ಎಂಬ ಹೆಂಡತಿ. ಮಡಿವಾಳಪ್ಪ ಎಂಬ ಮಗನಿದ್ದ ಎಂದು ಬ್ರಿಟೀಷ್ ಕಾಲದ ದಾಖಲೆಗಳು ಸಂಗೋಳ್ಳಿ ಗ್ರಾಮದ ಯುವ ಸಾಹಿತಿ ಬಸವರಾಜ್ ಕಮತೆ ಎಂಬುವರ ಸಂಶೋಧನೆಯಲ್ಲಿ ಅಮಟೂರಿನ ನಿಂಗಪ್ಪಾ ಶಿವಲಿಂಗಪ್ಪಾ ಕರಿಗಾರ ಮನೆಯಲ್ಲಿ ಸಿಕ್ಕಿವೆ ಅಂತೆ. ಅಲ್ಲದೆ ರಾಯಣ್ಣನಿಗೆ ಜನೆವರಿ ೨೬ ರಂದು ಗಲ್ಲಿಗೇರಿಸಿದ ನಂತರ ಆತನ ೧೩ ಎಕ್ಕರೆ ೨೦ ಗುಂಟೆ ಜಮೀನು ರೇತವ್ವಾ ಕೋಂ ರಾಯಣ್ಣಾ ರೋಗಣ್ಣವರ್ ಹೆಸರಿಗೆ ವರ್ಗಾವಣೆ ಗೊಂಡಿದೆ. ನಂತರ ೧೮೮೩ ರಲ್ಲಿ ರೇತವ್ವನ ಸೋಸೆ ನಿಂಗವ್ವಾ ಕೋಂ ಮಡಿವಾಳಪ್ಪಾ ರೋಗಣ್ಣವರ್ ಹೆಸರಿಗೆ ಬದಲಾಗಿದೆ. ಈ ಮಡಿವಾಳಪ್ಪಗೆ ಭೀಮಪ್ಪಾ , ಶಿವಲಿಂಗಪ್ಪಾ ಎಂಬ ಇಬ್ಬರು ಮಕ್ಕಳು ಇದ್ದರು ಎನ್ನಾಲಾಗಿದ್ದು. ಇವರು ೧೮೯೩ ರಲ್ಲಿ ಜಮೀನು ನೋಂದನೆ ಮಾಡಿಸಿ ದೇವಲಾಪೂರದ ಭೀಮಪ್ಪಾ ಲಗಮನ್ನವರಿಗೆ ಮಾರಾಟ ಮಾಡಿ ಬಂದ ೯೦೦ ಹಣ ಪಡೆದು ಊರು ಬಿಟ್ಟಿದ್ದಾರೆ ಅವರು ಈಗ ಎಲ್ಲಿ ಇದ್ದಾರೆ ಎಂಬುದು ಸಂಶೋದನೆಯಿಂದ ತಿಳಿಬೇಕು ಎಂಬುದು ತಜ್ಞರ ವಾದ