.ಬೆಳಗಾವಿ- ಕ್ರಾಂತಿ ವೀರ ,ರಾಣಿ ಚನ್ನಮ್ಮಾಜಿಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಉತ್ಸವ ಇದೇ ತಿಂಗಳ ೨೭ ರಿಂದ ಆರಂಭ ವಾಗಲಿದ್ದು ಈ ಉತ್ಸವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ
ಕ್ರಾಂತಿಯ ನೆಲ ಶೂರರ ನಾಡು ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಈ ಉತ್ಸವವ ಜನೇವರಿ ೨೭ ಹಾಗು ೨೮ ರಂದು ಎರಡು ದಿನಗಳ ಕಾಲ ನಡೆಯಲಿದೆ
ಕಿತ್ತೂರ ಉತ್ಸವಕ್ಕೆ ಬಾರದ ಮುಖ್ಯಮಂತ್ರಿ ರಾಯಣ್ಣನ ಉತ್ಸವಕ್ಕೆ ಬರುತ್ತಿರುವದರಿಂದ ನಮ್ಮ ಹೆಮ್ಮೆಯ ಕ್ರಾಂತಿ ಪುರುಷನ ಉತ್ಸವಕ್ಕೆ ಮತ್ತಷ್ಟು ಮೆರಗು ಬಂದಿದೆ ಜನೇವರಿ ೨೭ ರಂದು ಸಂಜೆ ೬ ಘಂಟೆಗೆ ನಾಡಿನ ದೊರೆ ಸಿದ್ಧರಾಮಯ್ಯ ಅವರು ರಾಯಣ್ಣನ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ
ಈ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಉಮಾಶ್ರೀ ಮತ್ತು ಜಿಲ್ಲೆ ಯ ಶಾಸಕರು ಸಂಸದರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಲಿದ್ದಾರೆ
ರಾಯಣ್ಣನ ಉತ್ಸವದಲ್ಲಿ ಕುಸ್ತಿ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಶೂರ ಸಂಗೊಳ್ಳಿ ರಾಯಣ್ಣನ ಸಮಾಧಿ ನಂದಗಡದಲ್ಲಿದೆ ಈ ಸ್ಥಳದ ಅಭಿವೃದ್ಧಿಗೆ ಹನ್ನೆರಡು ಎಕರೆ ಜಮೀನು ಖರೀಧಿಸಲಾಗಿದೆ ಇಲ್ಲಿ ಕುರುಕ್ಷೇತ್ರ ಮಾದರಿಯಲ್ಲಿ ಸ್ಮಾರಕ ಭವನ ಮತ್ತು ಓಪನ್ ಥೇಟರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿಸಿ ಜಯರಾಂ ತಿಳಿಸಿದರು
ಜೊತೆಗೆ ಸಂಗೊಳ್ಳಿಯಲ್ಲಿ ರಾಯಣ್ಣನ ಹೆಸರಿನಲ್ಲಿ ಸಹಾಸ ಕ್ರೀಡೆಗಳ ಶೌರ್ಯ ಅಕ್ಯಾಡಮಿ ನಿರ್ಮಿಸಲು ಸಂಗೊಳ್ಳಿಯಲ್ಲಿ ನೂರು ಎಕರೆಗೂ ಹೆಚ್ಚು ಜಮೀನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು