ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆಯ ದಿನಾಂಕ ಇನ್ನುವರೆಗೆ ಘೋಷಣೆ ಆಗಿಲ್ಲ ಆದ್ರೆ ಈ ಬಾರಿ ಬಿಜೆಪಿಯಿಂದ ಕಲ್ಲು ನಿಂತರೂ ಗೆಲ್ಲುತ್ತದೆ ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ,ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬಿಜೆಪಿಯಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ,ಈ ವಿಚಾರದಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ,ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸಂಜಯ ಪಾಟೀಲ ಹೇಳಿದರು.
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ದಿಸಲು ನಾನೂ , ಆಕಾಂಕ್ಷಿ ಅಲ್ಲ, ಆದ್ರೆ ನಾನೇನು ರಾಜಕೀಯ ಸನ್ಯಾಸಿ ಅಲ್ಲ,ಪಕ್ಷದ ಹಿರಿಯರು ನನ್ನನ್ನು ಗುರುತಿಸಬಹುದು ಎಂದು ಸಂಜಯ ಪಾಟೀಲ ಹೇಳಿದ್ದಾರೆ.
ಕಾಂಗ್ರೆಸ್ಸಿನಿಂದ ಈ ಬಾರಿ ಪ್ರಬಲ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸುತ್ತಿದ್ದಾರೆ,ಎಂದು ಮಾದ್ಯಮ ಮಿತ್ರರು ಪ್ರಶ್ನೆ ಮಾಡಿದಾಗ,ಚನ್ನರಾಜ ಹಟ್ಟಿಹೊಳಿ ಅವರು ಪ್ರಬಲ ಅಬ್ಯರ್ಥಿ ಅನ್ನೋದಾದ್ರೆ ಅದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅವಮಾನ ಎಂದು ಸಂಜಯ ಪಾಟೀಲ ಹೇಳಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ