ಬೆಳಗಾವಿ:ಜಿಲ್ಲೆಯಲ್ಲಿ ದನ ಕರುಗಳಿಗೆ ಚರ್ಮ ಗಂಟು ರೋಗ ಉಲ್ಬಣವಾಗಿ ಪ್ರಾಣಿಗಳು ಪ್ರಾಣವನ್ನು ಕಳೆದುಕೊಂಡ ರೈತರಿಗೆ ಉಂಟಾಗುತ್ತಿದ್ದ ನಷ್ಟ ತಪ್ಪಿಸಲು ರಾಜ್ಯ ಸರ್ಕಾರ 20ಸಾವಿರ ರೂಪಾಯಿ ಘೋಷಿಸಿರುವದು ರೈತರಿಗೆ ಅತ್ಮಸ್ಥೈರ್ಯ ತುಂಬಿದಂತಾಗಿದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲೆ ಬಿಜೆಪಿ ಅಧಕ್ಷ ಸಂಜಯ ಪಾಟೀಲ ಹೇಳಿದ್ದಾರೆ.
ಗುರುವಾರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಮುಖ್ಯ ಮಂತ್ರಿಗಳು ಹಾವೇರಿಯಲ್ಲಿ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಅದರಲ್ಲಿಯು ಬೆಳಗಾವಿ ಜಿಲ್ಲೆಯಲ್ಲಿಯ ರೈತರು ಸಾಕುವ ಆಕಳು, ಎತ್ತು ಹಾಗೂ ಎಮ್ಮೆಗಳಿಗೆ ಚರ್ಮದ ಗಂಟು ರೋಗ ಕಳೆದ ಎರಡಮೂರು ತಿಂಗಳಿಂದ ಉಲ್ಬಣವಾಗುತಿದ್ದು ಇದರ ಹತೋಟಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಿದರು ರೈತರು ಸಾಕಿದ ಕೆಲ ಪ್ರಾಣಿಗಳು ಸಾವನಪ್ಪುತಿದ್ದು ಇದರಿಂದ ರೈತ ಸಮುದಾಯ ಕಂಗಾಲವಾಗಿದೆ. ಇದನ್ನ ಅರಿತು ರಾಜ್ಯದ ರೈತ ಸಮುದಾಯದ ಬೆನ್ನಿಗೆ ನಿಂತ ಮುಖ್ಯಮಂತ್ರಿಗಳ ಕ್ರಮ ಶ್ಲಾಘನೀಯ ಎಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
