ಲಕ್ಷ್ಮೀ ಹೆಬ್ಬಾಳಕರ,ಚನ್ನರಾಜ್ ಬಿಜೆಪಿ ಸೇರ್ತಾರೆ ಎನ್ನುವ ಸುದ್ದಿ ಇದೆ- ಸಂಜಯ ಪಾಟೀಲ
ಬೆಳಗಾವಿ-ಬಿಜೆಪಿ ಉದಯಿಸುವ ಸೂರ್ಯ,ಕಾಂಗ್ರೆಸ್ ಮುಳುಗುವ ಹಡಗು, ಉದಯಿಸುವ ಸೂರ್ಯನನ್ನು ಎಲ್ಲರೂ ನಮಸ್ಕಾರ ಮಾಡ್ತಾರೆ,ಮುಳುಗುವ ಹಡಗನ್ನು ಯಾರೂ ಹತ್ತುವದಿಲ್ಲ,ಲಕ್ಷ್ಮೀ ಹೆಬ್ಬಾಳಕರ ಮತ್ತು ಚನ್ನರಾಜ್ ಹಟ್ಟಿಹೊಳಿ ಇಬ್ಬರೂ ಬಿಜೆಪಿ ಸೇರ್ತಾರೆ ಎನ್ನುವ ಸುದ್ದಿ ಇದೆ.ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಜಯ ಪಾಟೀಲ,ಲಕ್ಷ್ಮೀ ಹೆಬ್ಬಾಳಕರ ಮತ್ತು ಚನ್ನರಾಜ್ ಹಟ್ಟಿಹೊಳಿ ಇಬ್ಬರೂ ಬಿಜೆಪಿ ಸೇರುವ ಸುದ್ದಿ ಇದೆ.ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಅಚ್ಚರಿಯ ಹೇಳಿಕೆ ನೀಡಿ,ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಮಾಜಿ ಸಚಿವ ವಿನಯ ಕುಲಕರ್ಣಿ ಕೊಲೆ ಆರೋಪಿ,ಇವರ ಜನ್ಮ ದಿನದ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ್ ಖರ್ಗೆ ಭಾಗವಹಿಸುತ್ತಿರುವದು ಎಷ್ಟರ ಮಟ್ಟಿಗೆ ಸರಿ,ಈ ಮೂಲಕ ಕಾಂಗ್ರೆಸ್ ಯಾವ ರೀತಿಯ ಸಂದೇಶ ಕೊಡುತ್ತಿದೆ ಎಂದು ಸಂಜಯ ಪಾಟೀಲ ಟೀಕಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ