ಬೆಳಗಾವಿ: ಜಿಲ್ಲೆಯ ಅತ್ಯಂತ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆಯ ಬಿಸಿ ಏರುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲರ ಭಾವಚಿತ್ರವನ್ನು ಯುವಕನೋರ್ವ ತನ್ನ ಬಲಗೈಯ ಮೇಲೆ ಖಾಯಂ ಅಚ್ಚು ಹಾಕಿಕೊಳ್ಳುವ ಮೂಲಕ ತನ್ನ ಅಭಿಮಾನದ ಪರಕಾಷ್ಟೆಯನ್ನೆ ವ್ಯಕ್ತ ಪಡಿಸಿದ್ದಾನೆ.
ಗ್ರಾಮೀಣ ಕ್ಷೇತ್ರದ ಬಡಸ್ ಕೆ.ಎಚ್.ಗ್ರಾಮದ ಯುವಕ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಸುನೀಲ್ ದಳವಾಯಿ ಎಂಬಾತನು ಹನುಮಜಯಂತಿ ಹಾಗೂ ಬಿಜೆಪಿ ಸಂಸ್ಥಾಪನಾ ದಿನದ ನಿಮಿತ್ಯ ತನ್ನ ನಾಯಕನಿಗೆ ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲವು ಸಾಧಿಸಲೆಂದು ಹರಕೆ ಹೊತ್ತುಕೊಂಡಿದ್ದಾನೆ. ಹನುಮಂತ ತನ್ನ ಗುರು ರಾಮನ ಸೇವೆಗಾಗಿ ಸದಾ ಮೀಡುಯುತಿದ್ದಂತೆ, ನನ್ನ ನಾಯಕ ಸಂಜಯ ಪಾಟೀಲರ ಸದಾ ನೆನಪಿಗಾಗಿ ಹಾಗೂ ಅವರಿಗೆ ಗೆಲ್ಲುವ ಶಕ್ತಿ ಹನುಮಂತ ನೀಡಲೆಂದು ಪ್ರಾರ್ಥಿಸಿ ತನ್ನ ಬಲಗೈ ಮೇಲೆ ಸಂಜಯ ಪಾಟೀಲರ ಅಚ್ಚೆ ಹಾಕಿಸಿಕೊಳ್ಳುವ ಮೂಲಕ ತನ್ನ ಅಭಿಮಾನ ವ್ಯಕ್ತ ಪಡಿಸಿದ್ದಾನೆ.
ಈ ಸಂದರ್ಭದಲ್ಲಿ ಸಂಜಯ ಪಾಟೀಲರ ಹಸ್ತದಿಂದ ಅಚ್ಚೆಗೆ ಹಾಕಿದ್ದ ಬ್ಯಾಂಡೆಜ್ ತಗೆಯುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನಕ್ಕೆ ಕಾರ್ಯಕರ್ತನಿಂದ ವಿಶೇಷ ಕೊಡುಗೆ ನೀಡಿದಂತಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
