Breaking News

2023 ಕ್ಕೆ ಸಿಎಂ ಆಗಲು, ಆಂಜನೇಯನ ಆಶೀರ್ವಾದ

ಸಿಎಂ ಆಗೋ ಶುಭ ಸೂಚನೆ ತೋರಿದ ವಾನರ!

ಬೆಳಗಾವಿ(ಮಾರ್ಚ್9)- KPCC ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ರಾಜಕೀಯದಲ್ಲಿ ಸಿಎಂ ಆಗೋ ಉನ್ನತ ಕನಸು ಕಂಡಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಪಕ್ಷ ಸಂಘಟನೆಗೆ ಬೆಳಗಾವಿ, ರಾಜ್ಯದಲ್ಲಿ ಶತಪ್ರಯತ್ನ ಆರಂಭಿಸಿದ್ದಾರೆ. ಇವರಿಗೆ ವಾನರವೊಂದು ಶುಭ ಸೂಚನೆ ನೀಡಿದೆ. ಇದು ಅಭಿಮಾನಿಗಳು ಸಂತಸಕ್ಕೆ ಕಾರಣವಾಗಿದ್ದು, ಆದರೇ ಸ್ವತಃ ಸತೀಶ ಜಾರಕಿಹೊಳಿ‌ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಾರೆ.

ಇತ್ತೀಚೆಗೆ ಬೆಳಗಾವಿಯ ಭೂತರಾಮನಹಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಸಿಂಹಗಳು ಬಂದಿದ್ದು. ಇದರ ವೀಕ್ಷಣೆಗೆ ಸ್ಥಳೀಯ ಶಾಸಕ ಸತೀಶ ಜಾರಕಿಹೊಳಿ‌ ಆಗಮಿಸಿದ್ದರು. ಈ ವೇಳೆ ಸತೀಶ ಜಾರಕಿಹೊಳಿ‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮತ್ತೊಂದು ಕಡೆಯ ಅವರ ವಾಹನದ ಮೇಲೆ ಮಂಗವೊಂದ ಹತ್ತಿ ಕುಳಿತ್ತಿತ್ತು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರೋ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ‌ ‌ 2023 ಸಂಖ್ಯೆಯ ವಾಹನ ಬಳಸುತ್ತಿದ್ದಾರೆ. ಇದೀಗ ವಾನರ ಸಹ ಆರ್ಶೀವಾದ ಮಾಡಿದ್ದು, ಮುಂದೆ ಎನಾಗಲಿದೆ ಎಂಬ ಕುತೂಹಲ ಹುಟ್ಟಿಸಿದೆ.

ಸತೀಶ ಜಾರಕಿಹೊಳಿ‌ ಅನೇಕ ವರ್ಷಗಳಿಂದ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸ್ಮಶಾನದಲ್ಲಿ ವಾಹನ ಚಾಲನೆ ನೀಡುವ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದ್ದರು. ಇದನ್ನು ನಂಬುತ್ತಾರೆ ಇಲ್ಲವೋ‌ ಗೊತ್ತಿಲ್ಲ. ಆದರೇ ಅಭಿಮಾನಿಗಳು ಸಿಎಂ ಆಗಲಿ ಎಂದು ಹಾರೈಸಿದ್ದಾರೆ.ಜೊತೆಗೆ ಆಂಜನೇಯನ ಆಶಿರ್ವಾದವೂ ಲಭಿಸಿದ್ದು ವಿಶೇಷ….

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *