ಗೋಕಾಕ್-ಗೋಕಾಕ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸುದ್ಧಿಗೋಷ್ಠಿ ನಡೆಸಿಚಿಕ್ಕೋಡಿಯಲ್ಲಿ ಪುತ್ರಿ ಪ್ರಿಯಾಂಕಾ ಗೆಲುವಿನ ಕುರಿತು ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದ ಸಪೋರ್ಟ್, ನಮ್ಮ ಅಭಿವೃದ್ಧಿ ಕೆಲಸದಿಂದ ಗೆಲುವಾಗಿದೆ.ನಿರಂತರ ಸಂಪರ್ಕ ಈ ಚುನಾವಣೆ ಗೆಲ್ಲಲು ಅನುಕೂಲವಾಯಿತು.ಕೆಕವರು ನಮ್ಮ ವಿರುದ್ಧ ಜಾತಿ ಧರ್ಮ ಭಾಷೆ ಕುರಿತು ಪ್ರಚಾರ ಮಾಡಿದ್ರು.
ವಿರೋಧಿಗಳು ತಮ್ಮ ಆ್ಯಂಗಲ್ ನಲ್ಲಿ ಮಾತ್ರ ವಿಚಾರ ಮಾಡ್ತಾರೆ.ಜಾತಿವಾದಿಗಳಿಗೆ ಎಲ್ಲಿ ನಿಂತ್ರೂ ಅವಕಾಶ ಇರೊದಿಲ್ಲ.ಹೊರಗಿನವರ ಬಂದ್ರೂ ಒಳಗಿನವರು ಬಂದ್ರೂ ಅನ್ನೋದು ತಪ್ಪು ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.
ಚಿಕ್ಕೋಡಿಯಲ್ಲಿ ವೋಟರ್ಸ್ ನಮ್ಮ ಜತೆಗೆ ಇದ್ರು.ಅಲ್ಲಿನ ಬಿಜೆಪಿ ಅಭ್ಯರ್ಥಿ ಬಗ್ಗೆ ಜನರಿಗೆ ಅಸಮಾಧಾನ ಇತ್ತು, ಅದು ನಮಗೆ ಅನಕೂಲವಾಯಿತು.ಸತೀಶ್ ವಿರುದ್ಧ ಸ್ವಪಕ್ಷದವರೇ ವಿರೋಧ ಮಾಡಿದ ವಿಚಾರವಾಗಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಮಾಡಿದವರ ವಿರುದ್ಧ ದೂರು ನೀಡಲ್ಲ, ವರಿಷ್ಠರ ಗಮನಕ್ಕೆ ತರುತ್ತೇವೆ.
ಲೇಟರ್ ಕೊಟ್ಟರು ಏನು ಪ್ರಯೋಜನ ಆಗಲ್ಲ, ಯಾವುದೇ ಕ್ರಮವೂ ಆಗಲ್ಲ.ಹೀಗಾಗಿ ದೂರು ಕೊಡೊದಿಲ್ಲ, ಗಮನಕ್ಕೆ ತರುವೆ.ನಮಗೆ ಅವರು ಮೋಸ ಮಾಡಿಲ್ಲವಾದ್ರೆ ಇನ್ನೂ ಹೆಚ್ಚಿನ ಲೀಡ್ ಗೆ ಅವಕಾಶ ಇತ್ತು.ಎಂದು ಸತೀಶ್ ಹೇಳಿದ್ರು.
ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಸೋಲು ವಿಚಾರವಾಗಿ ಪ್ರಶ್ನೆ ಕೇಳಿದಾಗ,ಬೆಳಗಾವಿ ಅಭ್ಯರ್ಥಿ ಸೋಲಿಗೆ ಬಹಳಷ್ಟು ಕಾರಣವಿದೆ.ಅವೆಲ್ಲವನ್ನೂ ಸರಿಪಡಿಸಿದ್ರು ಗೆಲ್ಲಬಹದಿತ್ತು.ಅವರು ಅಸೆಸ್ ಮಾಡಲು ಆಗಲಿಲ್ಲ, ಅದು ಮುಖ್ಯ ಕಾರಣ.ಎದುರಾಳಿಗಳನ್ನ ಅಸೆಸ್ ಮಾಡಲು ವಿಫಲವಾಗಿದ್ದೇವೆ.ನಾವು ಸರಿಯಾಗಿ ಅಸೆಸ್ ಮಾಡಲಿಲ್ಲ ಅಂದ್ರೆ ಫೇಲ್ ಆಗ್ತೇವೆ ಎಂದು ಸತೀಶ್ ಹೇಳಿದ್ರುಪ್ಲಸ್ ಆಗುವ ಕಡೆ ಮೈನಸ್ ಮತ್ತು ಮೈನಸ್ ಆಗುವ ಕಡೆ ಪ್ಲಸ್ ಎಂದು ಅಸೆಸ್ ಮಾಡಿದ್ದು ಸೋಲಿಗೆ ಕಾರಣ ಆಯ್ತು ಅಂದ್ರು