ಬೆಳಗಾವಿ- ಸಿಎಂ ಸಿದ್ರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ಸಹ ದೆಹಲಿಗೆ ಹಾರಿದ್ದಾರೆ.ಅವರ ಹಿಂದೆ.ಮುಂದೆ ಈಗಾಗಲೇ ಡಿಸಿಎಂ ಸ್ಥಾನದ ಆಕಾಂಕ್ಷಿಗಳೂ ಸಹ ದೆಹಲಿಗೆ ಹೋಗಿದ್ದು ಇಂದು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಕರ್ನಾಟಕ ಕಾಂಗ್ರೆಸ್ ಬೀಡು ಬಿಟ್ಟಿದೆ
ಕರ್ನಾಟಕದಲ್ಲಿ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯಲಿದೆ.ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿಎಂ ಡಿಸಿಎಂ ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗಿದ್ದಾರೆ.ಜಾತಿವಾರು ಡಿಸಿಎಂ ಹುದ್ದೆಗಳನ್ನು ಹಂಚಬೇಕು ಎನ್ನುವ ಬೇಡಿಕೆಗೆ ಈಗ ಮರುಜೀವ ಬಂದಿದ್ದು ಡಿಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಗುದ್ದಾಟ ಶುರುವಾಗಿದೆ.
ನನಗೆ ಡಿಸಿಎಂ ಸ್ಥಾನ ಕೊಡಿ ಎಂದು ಯಾರೂ ಬಹಿರಂಗವಾಗಿ ಕೇಳಿಲ್ಲ.ಆದ್ರೆ ಜಾತಿವಾರು ಡಿಸಿಎಂ ಸ್ಥಾನ ಕೊಡಿ ಎನ್ನುವ ಬೇಡಿಕೆ ಇಟ್ಟಿದ್ದು ಬಹಿರಂಗ ಸತ್ಯ. ಒಂದು ವೇಳೆ ಕಾಂಗ್ರೆಸ್ ಜಾತಿವಾರು ಲಿಂಗಾಯತ,ಪರಿಶಿಷ್ಟ ವರ್ಗ, ಮತ್ತು ಮುಸ್ಲೀಂ, ಒಕ್ಕಲಿಗ ಸಮುದಾಯಗಳಿಗೆ ಡಿಸಿಎಂ ಸ್ಥಾನಗಳನ್ನು ಕೊಟ್ಟಿದ್ದೇ ಆದಲ್ಲಿ ರಾಜ್ಯದ ಪ್ರಭಾವಿ ನಾಯಕ ಸಂಘಟನಾ ಚತುರ, ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ಸಿಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.
ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು ಸತೀಶ್ ಜಾರಕಿಹೊಳಿ ಅವರನ್ನು NEXT ಸಿಎಂ ಎಂದೇ ಪ್ರಚಾರ ಶುರು ಮಾಡಿದ್ದು.ಈಗಿನ ಸದ್ಯದ ಪರಿಸ್ಥತಿಯನ್ನು ಅವಲೋಕಿಸಿದರೆ ಸತೀಶ್ ಜಾರಕಿಹೊಳಿ ಫಸ್ಟ್ ಡಿಸಿಎಂ next ಸಿಎಂ ಎನ್ನುವ ಲಕ್ಷಣಗಳು ಕಾಣಿಸುತ್ತಿವೆ.
ಸತೀಶ್ ಜಾರಕಿಹೊಳಿ ಸೇರಿದಂತೆ ರಾಜ್ಯದ ಹಲವಾರು ಜನ ನಾಯಕರು ದೆಹಲಿಯಲ್ಲಿ ಇದ್ದು ಡಿಸಿಎಂ ಸ್ಥಾನಗಳ ಹಂಚಿಕೆ ಕುರಿತು ಇಂದು ದೆಹಲಿಯಲ್ಲಿ ಬಿಸಿಬಿಸಿ ಚರ್ಚೆ ನಡೆದು ಈ ಕುರಿತು ಅಂತಿಮ ತೀರ್ಮಾಣ ಹೊರಬೀಳುತ್ತೋ ? ಅಥವಾ ಡಿಸಿಎಂ ಸ್ಥಾನಗಳ ಬೇಡಿಕೆ ವಿಚಾರ ಈ ಬಾರಿಯೂ ಠುಸ್ಸ್ ಆಗುತ್ತೋ ಕಾದು ನೋಡಬೇಕಾಗಿದೆ.