ಯಲ್ಲಮ್ಮನ ದೇವಸ್ಥಾನದ ಅಭಿವೃದ್ಧಿಗೆ 200 ಕೋಟಿ ಅನುದಾನ…..
ಸತೀಶ್ ಜಾರಕಿಹೊಳಿ ಅವರನ್ನು ಕೆಲವರು ಜನನಾಯಕ, ಮಾಸ್ ಲೀಡರ್, ಪ್ರಭಾವಿ ನಾಯಕ ಮಾಸ್ಟರ್ ಮೈಂಡ್ ಎಂದು ಸತೀಶ್ ಅವರನ್ನು ಹೊಗಳುತ್ತಾರೆ. ಆದ್ರೆ ಇನ್ನು ಕೆಲವು ಜನ ಅವರನ್ನು, ನಾಸ್ತಿಕ, ಹಿಂದೂ ವಿರೋಧಿ,ಸತೀಶ್ ಅವರಲ್ಲಿ ಶ್ರದ್ಧೆಯೂ ಇಲ್ಲ.ಭಕ್ತಿಯೂ ಇಲ್ಲ,ಅವರು ಎಂದಿಗೂ ದೇವಸ್ಥಾನಕ್ಕೆ ಹೋಗುವುದು ಇಲ್ಲ ಎಂದು ಕೆಲವು ಜನ ಸತೀಶ್ ಜಾರಕಿಹೊಳಿ ವಿರುದ್ಧ ಟೀಕೆ ಮಾಡುವವರೂ ಇದ್ದಾರೆ. ಆದ್ರೆ ಸತೀಶ್ ಜಾರಕಿಹೊಳಿ ಅವರು ಸುಕ್ಷೇತ್ರ,ಪವಿತ್ರ,ಪ್ರಸಿದ್ಧ ಯಲ್ಲಮ್ಮನ ದೇವಸ್ಥಾನದ ಅಭಿವೃದ್ಧಿಗೆ 200 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಎಲ್ಲ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.ಟೀಕಾಕಾರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ನನ್ನ ಹೋರಾಟ ಇರುವುದು ಅಂಧಶ್ರದ್ಧೆಯ ವಿರುದ್ಧವೇ ಹೊರತು ಶ್ರದ್ಧೆಯ ವಿರುದ್ಧ ಅಲ್ಲ ಎಂದು ಸತೀಶ್ ಜಾರಕಿಹೊಳಿ ತೋರಿಸುವ ಮೂಲಕ ನನಗೂ ನಂಬಿಕೆಯ ಬಗ್ಗೆ ಭಕ್ತಿ ಇದೆ,ಶ್ರದ್ಧೆ ಇದೆ ನನ್ನ ಹೋರಾಟ ಇರುವದು ಮೂಡನಂಬಿಕೆಯ ವಿರುದ್ಧವೇ ಹೊರತು ನಂಬಿಕೆಯ ವಿರುದ್ಧ ಅಲ್ಲ ಎಂದು ಸತೀಶ್ ಜಾರಕಿಹೊಳಿ ತೋರಿಸಿದ್ದಾರೆ
ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಶಾಸಕರಾದ ಬಳಿಕ ಸವದತ್ತಿ ಯಲ್ಲಮ್ಮನ ಸುಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಸಂಕಲ್ಪ ಮಾಡುವ ಮೂಲಕ ಅದಕ್ಕೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಸಚಿವ ಹೆಚ್ ಕೆ ಪಾಟೀಲ ಅವರನ್ನು ಹತ್ತು ಹಲವು ಬಾರಿ ಯಲ್ಕಮ್ಮನ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದಾರೆ. ಹೆಚ್ ಕೆ ಪಾಟೀಲ ಅವರನ್ನು ಮನವೊಲಿಸಿ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿಶ್ವಾಸಕ್ಕೆ ಪಾತ್ರರಾಗಿರುವ ಶಾಸಕ ವಿಶ್ವಾಸ್ ವೈದ್ಯ ಸವದತ್ತಿ ಯಲಮ್ಮನ ಸನ್ನಿಧಿಯಲ್ಲಿ ಭಕ್ತಿಯ ಭಂಡಾರ. ಹಾರಿಸಿ ಅಭಿವೃದ್ಧಿಯ ಹೊಳೆ ಹರಿಸುವಲ್ಲಿ ಸಫಲರಾಗಿದ್ದಾರೆ.
ಸವದತ್ತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು.
ಸವದತ್ತಿ: ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ 2 ನೂರು ಕೋಟಿ ರೂ.ಗಳಲ್ಲಿ ಹೈಟೆಕ್ ಅಭಿವೃದ್ದಿಯನ್ನು ಮಾಡಲು ಯೋಜನೆ ರೂಪಿಸಿದ್ದು, ಬರುವಂತ ಅಧಿವೇಶನ ಮುಗಿದ ನಂತರ ಈ ಯೋಜನೆಗೆ ತಕ್ಷಣ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹ್ವಾಲುಗಳನ್ನು ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಲ್ಲಮ್ಮಾ ದೇವಸ್ಥಾನದಲ್ಲಿ ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ದೇವಸ್ಥಾನದ ಆವರಣದಲ್ಲಿ ಸ್ವಚ್ಚತೆಯ ದೃಷ್ಠಿಕೋನದಲ್ಲಿ ವಿಶೇಷ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲರು ದೇವಸ್ಥಾನದ ಅಭಿವೃದ್ದಿಗೋಸ್ಕರ ವಿಶೇಷ ಕಾಳಜಿ ವಹಿಸಿದ್ದು, ಬರುವಂತ ದಿನಗಳಲ್ಲಿ ಯಲ್ಲಮ್ಮಾ ದೇವಸ್ಥಾನ ಮಾದರಿ ದೇವಸ್ಥಾನವಾಗಿ ಹೊರಹೊಮ್ಮಲಿದೆ ಎಂದರು.
ದೇವೇಗೌಡರ ಅವಧಿಯಲ್ಲಿ ಸವದತ್ತಿಗೆ ರೈಲ್ವೆ ಮಾರ್ಗ ನಿರ್ಮಿಸಲು ಸರ್ವೆ ಮಾತ್ರ ಮಾಡಲು ಸೂಚಿಸಲಾಗಿದ್ದು, ಈ ಭಾಗದಲ್ಲಿ ರೈಲ್ವೆ ಮಾರ್ಗ ನಿರ್ಮಿಸುವ ಕುರಿತು ಇಲ್ಲಿಯವರೆಗೆ ಯಾವುದೇ ಅನುಮೋದನೆ ಸಿಕ್ಕಿಲ್ಲ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ರೈಲ್ವೆ ಯೋಜನೆಗಳು ಇನ್ನು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು, ಅವುಗಳು ಪರಿಪೂರ್ಣಗೊಂಡ ನಂತರ ಅವಶ್ಯಗತೆಗನುಗುಣವಾಗಿ ಸವದತ್ತಿ ಮಾರ್ಗವಾಗಿ ರೈಲ್ವೆ ಯೋಜನೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಸವದತ್ತಿಯಲ್ಲಿ ಯಾವುದಾದರೊಂದು ಕೈಗಾರಿಕೆಯನ್ನು ಪ್ರಾರಂಭಿಸಬೇಕೆಂಬ ಬೇಡಿಕೆ ಇದ್ದು, ಶಾಸಕ ವಿಶ್ವಾಸ ವೈದ್ಯರವರು ಈ ಕುರಿತು ಪ್ರಸ್ತಾವಣೆ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ಕನಿಷ್ಠ 50 ಎಕರೆ ಜಾಗವೇನಾದರೂ ಸಿಕ್ಕಲ್ಲಿ ಧಾರವಾಡ ಹುಬ್ಬಳ್ಳಿಯಲ್ಲಿ ನಿಮಾಣವಾಗುತ್ತಿರುವ ಕೆಲವು ಕೈಗಾರಿಕೆಗಳನ್ನು ಸವದತ್ತಿಯಲ್ಲಿ ಪ್ರಾರಂಭಿಸಲು ಯೋಜನೆಯನ್ನು ರೂಪಿಸಲಾಗುತ್ತದೆ ಎಂದರು.