ಬೆಳಗಾವಿ-
ಜೆಡಿಎಸ್ ನವರು ನನ್ನ ಜೊತೆ ಮಾತನಾಡಿಲ್ಲ.
ನಾನು ಪಕ್ಷ ಬಿಡುವ ಚಿಂತನೆ ಮಾಡಿಲ್ಲ
ಅಸಮಾಧಾನ ಇರುವುದು ಜಿಲ್ಲೆಯ ಮಟ್ಟಿಗೆ
ರಾಜ್ಯಮಟ್ಟಕ್ಕೆ ಸಂಬಂಧ ಇಲ್ಲ.
ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ ಎಂದು ಬೆಳಗಾವಿಯಲ್ಲಿ ಸತೀಶ ಜಾರಕಿಹೋಳಿ ಹೇಳಿದ್ದಾರೆ
ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು
ಈಗಾಗಲೇ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಅಧಿಕಾರಕ್ಕಾಗಿ ಬದಲಾವಣೆಯಾವುದಿಲ್ಲ
ಸಿದ್ದಾಂತಕ್ಕೆ ಮಾತ್ರ ಬದಲಾಗುತ್ತೇನೆ
ಅಧಿಕಾರ ನೀಡಿದ ಕಡೆ ನಾನು ಹೋಗುವುದಿಲ್ಲ ಆದರೆ ಜಿಲ್ಲೆಯಲ್ಲಿ ನನ್ನ ಬೆಂಬಲಿಗರಿಗೆ ಟಿಕೇಟ್ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದನ್ನ ಪಕ್ಷದ ವರಿಷ್ಠ ರಿಗೆ ತಿಳಿಸಲಾಗಿದೆ ಎಂದು ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ತಿಳಿಸಿದರು
ಇದನ್ನ ಶೀಘ್ರದಲ್ಲಿ ಸರಿಪಡಿಸುವ ವಿಶ್ವಾಸವಿದೆ
ಸಿದ್ದಾಂತಕ್ಕಾಗಿ ನಮ್ಮ ಹೋರಾಟ. ನಾನೇ ಸ್ವತಃ ೩ ಭಾರೀ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ನಾನು ಸಿಎಂ ಸ್ಥಾನ ಕೇಳಲು ೧೦ ವರ್ಷ ಸಮಯವಿದೆ.
ಹತ್ತು ವರ್ಷಗಳ ನಂತರ ಮುಖ್ಯಮಂತ್ರಿ ಪದವಿ ಕೇಳುತ್ತೀನೆ ಎಲ್ಲರಂತೆ ನಾನು ಶಾರ್ಟ್ ಕಟ್ ಹೋಗಲು ಇಷ್ಟವಿಲ್ಲ.
ಎರಡು ಚುನಾವಣೆಯ ನಂತರ ಸಿಎಂ ಪದವಿ ಕೇಳುತ್ತೇನೆ. ಈಗ ಯಾರ ಸಿಎಂ ಆಗ್ತಾರೆ ಅನ್ನೋ ಬಗ್ಗೆ ಯೋಚನೆ ಇಲ್ಲ ಎಂದು
ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಹೇಳಿದರು