ಬೆಳಗಾವಿ – ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ನಿರಂತರವಾಗಿ ಸಾವಿರಾರು ಭಕ್ತರು ಹೋಗ್ತಾರೆ,ಅದರಲ್ಲೂ ಬೆಳಗಾವಿ,ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಾರೆ, ಉಳವಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಈ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಬೆಳಗಾವಿಯ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಲಾಯಿತು.
ಸುಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ದರ್ಶನ ಪಡೆಯಯಲು ನಿತ್ಯ ಸಾವಿರಾರು ಭಕ್ತರು ಉಳವಿಗೆ ಹೋಗುತ್ತಾರೆ. ಚಕ್ಕಡಿ ಬಂಡಿ ಮೂಲಕ ಕುಟುಂಬ ಸಮೇತ ಹೋಗುತ್ತಾರೆ ವಿಪರೀತ ಮಳೆಯಿಂದಾಗಿ ಪೂಟೊಳ್ಳಿ ಕ್ರಾಸ್ ನಿಂದ ಗುಂದ ಮಾರ್ಗವಾಗಿ ಉಳವಿಗೆ ಹೋಗುವ ರಸ್ತೆ ಹಾಳಾಗಿದ್ದು ಇದರಿಂದ ಭಕ್ತರು ತೊಂದರೆಯಾಗಿದ್ದು ಕೂಡಲೇ ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಕರವೇ ಕಾರ್ಯಕರ್ತರು ಮತ್ತು ಭಕ್ತರು ಸಚಿವರಲ್ಲಿ ಮನವಿ ಮಾಡಿಕೊಂಡರು.
ಈ ವಿಚಾರಕ್ಕೆ ಸ್ಥಳದಲ್ಲೇ ಸ್ಪಂದಿಸಿದ ಸಚಿವ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ , ಉಳವಿಯ ರಸ್ತೆ ದುರಸ್ಥಿಗೆ ತಕ್ಷಣವೇ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದು ಆದಷ್ಟು ಬೇಗನೆ ರಸ್ತೆ ದುರಸ್ತಿಗೆ ಟೆಂಡರ್ ಕರೆಯುವಂತೆ ಆದೇಶಿಸುವ ಮೂಲಕ ಸತೀಶ್ ಜಾರಕಿಹೊಳಿ ಉಳವಿ ಭಕ್ತರ ಮನವಿಗೆ ಸ್ಪಂದಿಸಿದ್ದಾರೆ.
ದೀಪಕ ಗುಡಗನಟ್ಟಿ, ರವಿ ಜಿಂದ್ರಾಳೆ, ರಾಜು ಕುಡಸೋಮಣ್ಣವರ ಶಿವಾನಂದ ತಂಬಾಕಿ,ರಾಜು ಸೊಗಲದ, ಜಗದೀಶ್ ಮಾಳಗಿ ಬಸವರಾಜ್ ಬೋಳಗೌಡರ ರಮೇಶ್ ಯರಗಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.