ಬೆಳಗಾವಿ-ಮಾನವ ಬಂಧುತ್ವ ವೇದಿಕೆಯಿಂದ ನಾಳೆ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದ್ದು ಸತಿಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆಒತ್ತಾಯಿಸಲಿದ್ದು ನಮ್ಮ ಕೋಟಾ ಮುಗಿದಿದೆ ಪ್ರತಿಭಟನೆಗೆ ಮಣಿದು ನನಗೆ ಸಚೀವ ಸ್ಥಾನ ಕೊಟ್ರೂ ಬೇಡ ಅಂತಾ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ
ಈ ಕುರಿತು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು
ಪ್ರತಿಭಟನಾ ರ್ಯಾಲಿಯಲ್ಲಿ ನಾನು ಭಾಗಿಯಾಗುತ್ತಿಲ್ಲ ಎಂದು ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ
ಸಮಾನಮನಸ್ಕರರು ಪ್ರೀಡಂ ಪಾರ್ಕಿನಲ್ಲಿ ನಾಳೆ ಪ್ರತಿಭಟನೆ ನಡೆಸುತ್ತಿದ್ದಾರೆ ಬುದ್ಧಿಜೀವಿಗಳು ಹಾಗೂ ರಾಜ್ಯದ ವಿವಿಧ ಸಂಘಟನೆಗಳು, ಬೆಂಬಲಿಗರು ಭಾಗಿಯಾಗುತ್ತಿದ್ದಾರೆನಾಳೆ ಯಾವ ರೀತಿಯಾಗಿ ಬುದ್ಧಿಜೀವಿಗಳು ನಮಗೆ ಮತ್ತೆ ಸಮ್ಮಿಶ್ರ ಸರ್ಕಾರಕ್ಕೆ ಸಲಹೆ ನೀಡುತ್ತಾರೆ ನೋಡೋಣ ಎಂದು ಸತೀಶ ಜಾರಕಿಹೊಳಿ ಹೇಳಿದರು
ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ನನ್ನ ಪರವಾಗಿ ನಾಳೆ ಪ್ರತಿಭಟನೆ ನಡೆಸುತ್ತಿದ್ದಾರೆ ಪ್ರತಿಭಟನೆಗೆ ಮಣಿದು ಸಚಿವ ಸ್ಥಾನ ಈಗ ಕೊಟ್ಟರು ನನಗೆ ಬೇಡ
ಈಗ ಸಚಿವ ಸ್ಥಾನದಲ್ಲಿ ನಮ್ಮ ಕೋಟಾ ಮುಗದಿದೆ ಹೀಗಾಗಿ ಎರಡು ವರ್ಷ ಕಾಯಬೇಕು ಎರಡು ವರ್ಷದ ನಂತರ ಮತ್ತೆ ಸಂಪುಟ ವಿಸ್ತರಣೆ ಆಗಲಿದೆ ಸಂಪುಟ ವಿಸ್ತರಣೆ ಸುಳಿವು ಬಿಟ್ಟು ಕೊಟ್ಟ ಸತೀಶ್ ಜಾರಕಿಹೋಳಿ ಈಗ ಸದ್ಯಕ್ಕೆ ಮಂತ್ರಿ ಸ್ಥಾನ ಬೇಡ ಎನ್ನುವ ಅಭಿಪ್ರಾಯ ವ್ಯೆಕ್ತಪಡಿಸಿದರು
ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು
ಹಿಂದೆ ಕೂಡ ಹೊಸ ಸರ್ಕಾರ ಬಂದಾಗ ಬಜೆಟ್ ಮಂಡನೆ ಮಾಡಿದ್ದರು
ಈಗ ಹೊಸ ಸರ್ಕಾರ ಬಂದಿದೆ ಹೀಗಾಗಿ ಇವರು ಕೂಡ ಬಜೆಟ್ ಮಂಡನೆ ಮಾಡಬಹುದು
ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕಾರಣಕ್ಕೆ ಬೇಡಾ ಅಂದಿದ್ದಾರೆ ಗೊತ್ತಿಲ್ಲ
ಹೊಸ ಸರ್ಕಾರ ಹೊಸ ಬಜೆಟ್ ಮಾಡುವುದಕ್ಕೆ ನಾನು ಬೆಂಬಲಿಸುತ್ತೇನೆ ಎಂದರು
ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಇಲ್ಲವಾದರೆ ಮತ್ತೆ ಅಸಮಾಧಾನ ಏಳುವ ಸಾದ್ಯತೆ ಇದೆ ಅತೃಪ್ತರು ಸಭೆಗಳನ್ನ ಮಾಡಬಾರದು ಎಂದು ಉಸ್ತುವಾರಿ ವೇಣುಗೋಪಾಲ ಹೇಳಿದ್ದಾರೆ ಹೀಗಾಗಿ ನಾವು ಸಭೆಗಳನ್ನ ಮಾಡುತ್ತಿಲ್ಲ, ವೈಯಕ್ತಿಕವಾಗಿ ಚರ್ಚೆ ಮಾಡುತ್ತಿದ್ದೇವೆ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಬೆಳಗಾವಿಯಲ್ಲಿ ಸತೀಶ್ ಜಾರಕಿಹೋಳಿ ಹೇಳಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ