Breaking News

ಬೆಳಗಾವಿಯಲ್ಲಿ ಶಾಸಕ ಭವನ ನಿರ್ಮಾಣ ಮುಖ್ಯಮಂತ್ರಿಗಳ ಜೊತೆ ಚರ್ಚೆ- ರೇವಣ್ಣ

ಬೆಳಗಾವಿ-
ಕೇಂದ್ರದ ಸಿ ಆರ್ ಎಫ್ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುವ ವಿಚಾರವಾಗಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಸಲಾಗುವದು ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ರವಿವಾರ ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಇತ್ತಿಚೆಗೆ ಸುರಿದ ಭಾರಿ ಮಳೆ ಹಾಗೂ ನೆರೆಹಾವಳಿಯಿಂದ ಹಾಳಾಗಿರುವ ರಸ್ತೆ, ಸೇತುವೆ, ಸಿ.ಡಿ ಹಾಗೂ ಕಟ್ಟಡಗಳ ಸ್ಥಿತಿ ಮತ್ತು ದುರಸ್ತಿಯ ಬಗ್ಗೆ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿದ ಅವರು ಈ ಸಭೆಯ ನಂತರ ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡಕರಿ ಅವರನ್ನು ನಿಯೋಗದ ಮೂಲಕ ಭೆಟ್ಟಿಯಾಗುವದಾಗಿ ಹೇಳಿದರು.

ಕೇಂದ್ರ ಸರಕಾರ ಈಗ ನೀಡುತ್ತಿರುವ ಸಿ ಆರ್ ಎಫ್ ಹಣ ಸಾಲುವದಿಲ್ಲ. ಇದರಿಂದ ಸಾಕಷ್ಟು ಯೋಜನೆಗಳು
ಅರ್ಧಕ್ಕೆ ನಿಂತಿವೆ. ಕೆಲಸ ಮಾಡಿದರೂ ಹಣ ಬಿಡುಗಡೆಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೇಂದ್ರದ ಸಚಿವ ನಿತಿನ್ ಗಡಕರಿ ಅವರನ್ನು ಭೆಟ್ಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಪ್ರಯತ್ನಿಸಬೇಕು ಎಂದು ಅವರು ಸಂಸದರಾದ ಸುರೇಶ ಅಂಗಡಿ ಹಾಗೂ ಪ್ರಕಾಶ ಹುಕ್ಕೇರಿ ಅವರಲ್ಲಿ ಮನವಿ ಮಾಡಿದರು.

ಕೇಂದ್ರದಿಂದ ರಾಜ್ಯ ಸರಕಾರಕ್ಕೆ ಪ್ರತಿ ವರ್ಷ 500 ಕೋಟಿ ಸಿ ಆರ್ ಎಫ್ ಹಣ ಬರುತ್ತದೆ. ಆದರೆ ನಾವು ಕೈಗೊಂಡಿರುವ ಕಾಮಗಾರಿಗಳಿಗೆ 7000 ಕೋಟಿ ರೂ ಗಳ ಅಗತ್ಯವಿದೆ. ಈಗಿನ ಲೆಕ್ಕದಂತೆ 7000 ಕೋಟಿ ರೂ ಬರಲು ನಾವು ಇನ್ನೂ 12 ವರ್ಷ ಕಾಯಬೇಕು. ಆದ್ದರಿಂದ ಆದಷ್ಟು ಬೇಗ ಕೇಂದ್ರ ಸಚಿವರನ್ನು ನಿಯೋಗದ ಮೂಲಕ
ಭೆಟ್ಟಿ ಮಾಡಿ ಮನವಿ ಮಾಡಲಾಗುವದು ಎಂದು ಹೇಳಿದರು.

ಸಿಆರ್‍ಎಫ್ ಅಡಿ ಸುಮಾರು 7000 ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಪ್ರತಿವರ್ಷ ಕೇವಲ 500 ಕೋಟಿ ಮಾತ್ರ ಬಿಡುಗಡೆ ಮಾಡುತ್ತಿರುವುದರಿಂದ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿವರ್ಷ ಅ„ವೇಶನ ನಡೆಯುತ್ತಿರುವುದರಿಂದ ಶಾಸಕರಿಗೆ ವಸತಿ ಕಲ್ಪಿಸಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಶಾಸಕರ ಭವನದ ನಿರ್ಮಾಣದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಡಿ.ರೇವಣ್ಣ ಶಾಸಕರ ಭವನ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಅನುದಾನದ ಕೊರತೆ ಇಲ್ಲ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿಗೆ ತಕ್ಷಣ ಕ್ರಮಕೈಗೊಳ್ಳಬೇಕು. ಮೊದಲ ಹಂತದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು. ಯಾವುದಕ್ಕೂ ಅನುದಾನದ ಕೊರತೆ ಇಲ್ಲ. ಹಣ ಬಿಡುಗಡೆಗೆ ಸಹ ನಮ್ಮನ್ನು ಕಾಯದೆ ಕೆಲಸ ಆರಂಭಿಸಬೇಕು ಎಂದು ಸಚಿವ ರೇವಣ್ಣ ಜಿಲ್ಲಾ„ಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅ„ಕಾರಿಗಳಿಗೆ ಸೂಚನೆ ನೀಡಿದರು.

ಮಳೆಗಾಲ ಮುಗಿದ ನಂತರ ಅಂದರೆ ಸಪ್ಟಂಬರ್ ಹಾಗೂ ಅಕ್ಟೋಬರ್‍ದಲ್ಲಿ ಎರಡನೇ ಹಂತದಲ್ಲಿ ರಸ್ತೆ ಮತ್ತು ಸೇತುವೆಗಳ ದುರಸ್ತಿ ಕಾರ್ಯ ಆರಂಭಿಸಬೇಕು. ಇದರಲ್ಲಿ ಯಾವ ರಸ್ತೆ ಅಥವಾ ಸೇತುವೆ ಬಿಟ್ಟುಹೋಗಬಾರದು. ಶಾಸಕರು ಹಾಗೂ ಪಂಚಾಯತ್ ಸದಸ್ಯರಿಂದ ಇದರ ಬಗ್ಗೆ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದರು.

ಬೆಳಗಾವಿ ಜಿಲ್ಲೆಯಲ್ಲಿ 2351 ಕಿಲೋಮೀಟರ್, ಬಾಗಲಕೋಟೆ ಜಿಲ್ಲೆಯಲ್ಲಿ 814.36 ಹಾಗೂ ವಿಜಯಪುರ ಜಿಲ್ಲೆಯಲ್ಲಿ 708.50 ಕಿ ಮೀ ರಾಜ್ಯ ಹೆದ್ದಾರಿ ಇದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 3045.97 ಕಿ ಮೀ, ವಿಜಯಪುರ ಜಿಲ್ಲೆಯಲ್ಲಿ 2396.15 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 1586.20 ಮುಖ್ಯ ರಸ್ತೆಗಳಿದ್ದು ಈ ಎಲ್ಲ ರಸ್ತೆಗಳಲ್ಲಿ ಅದ್ಯತೆಯ ಮೇರೆಗೆ ಗುಂಡಿ ಮುಚ್ಚುವ ಕಾರ್ಯ ಆರಂಭಿಸಬೇಕು ಎಂದು ಅವರು ಸೂಚನೆ ನೀಡಿದರು.

ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ ಚಿಕ್ಕೋಡಿ ತಾಲೂಕಿನಲ್ಲಿ ಚಂದೂರ ಟೇಕ್ ಹಾಗೂ ಸೈನಿಕ್ ಟಾಕಡಿ ನಡುವಿನ ಸೇತುವೆ ನಿರ್ಮಾಣ ಇನ್ನೂ ಮುಗಿದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಪ್ರಗತಿಯಾಗಿಲ್ಲ. ಮೊದಲು ನಿಗದಿಯಾದಂತೆ 2016 ರಲ್ಲಿ ಇದು ಪೂರ್ಣವಾಗಬೇಕಿತ್ತು. ಆದರೆ ಆ„ಕಾರಿಗಳು ನಿರ್ಲಕ್ಷ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಸೇತುವೆ ಗುತ್ತಿಗೆದಾರರಿಗೆ ನಾಳೆ ಅಂತಿಮ ನೊಟೀಸ್ ನೀಡಿ ಉಳಿದ ಕಾಮಗಾರಿಯನ್ನು ಹೊಸದಾಗಿ ಟೆಂಡರ್ ಕರೆದು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ ನಮ್ಮ ಕ್ಷೇತ್ರದ ಕೆಲವು ಭಾಗಗಳಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ರಸ್ತೆಗಳ ನಿರ್ಮಾಣ ಆಗಿಲ್ಲ. ಮಾಡಿರುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅದ್ದರಿಂದ ಹೆಚ್ಚಿನ ಅನುದಾನ ನೀಡಿ ರಸ್ತೆಗಳ ನಿರ್ಮಾಣಕ್ಕೆ ಸೂಚನೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಮಹದೇವಪ್ಪ
ಯಾದವಾಡ, ಅನಿಲ ಬೆನಕೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ„ಕಾರಿ ರಾಮಚಂದ್ರನ್, ಅಪರ ಜಿಲ್ಲಾ„ಕಾರಿ ಎಚ್ ಬಿ ಬೂದೆಪ್ಪ ಉಪಸ್ಥಿತರಿದ್ದರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.