ಬೆಳಗಾವಿ: ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಶಾಸಕರೊಡನೆ ಅಜ್ಮಿರ್ ಪ್ರವಾಸ ಕೈಗೊಂಡಿರುವ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಗುರುವಾರ ಜಿಪಂ ಅಧ್ಯಕ್ಷರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಸಚಿವ ರಮೇಶ ಜಾರಕಿಹೊಳಿ ಶಾಸಕರೊಂದಿಗೆ ಅಜ್ಮಿರ್ ಪ್ರವಾಸ ಕೈಗೊಂಡಿರುವ ಹಿಂದೆ ಯಾವುದೇ ರಾಜಕೀಯವಿಲ್ಲ. ಅದ ಸಹಜ ಪ್ರವಾಸ. ಈ ಹಿಂದೆ ಅಶೋಕ ಪಟ್ಟಣ ಸೇರಿದಂತೆ ನಾನು ಪ್ರವಾಸಕ್ಕೆ ಹೋಗಿದ್ದೆ ಅದಕ್ಕೆ ರಾಜಕೀಯ ಕಲ್ಪಿಸುವುದು ಸರಿಯಲ್ಲ ಎಂದರು.
ಗಡಿಭಾಗದಲ್ಲಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಬಜೆಟ್ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ನೇಮಕಮಾಡುವಲ್ಲಿ ವಿಳಂಭವಾಗಿದೆ. ಈ ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇನಕ ಮಾಡಬಹುದು ಎಂದರು.
ಜಿಪಂನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಜು.೨೩ಕ್ಕೆ ನಡೆಯಲಿದೆ. ಈ ಸಲ ಹೊಸಬರಿಗೆ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ