Breaking News

ಅಭಿವೃದ್ಧಿಯ ಇಚ್ಛಾಶಕ್ತಿ ಅಂದ್ರೆ ಇದಪ್ಪ….

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರವನ್ನು ಬೆಳಗಾಗುವಷ್ಟರಲ್ಲಿ ಅಭಿವೃದ್ಧಿ ಮಾಡಿ ತೋರಿಸಬೇಕು ಎನ್ನುವ ಛಲದೊಂದಿಗೆ ಫುಲ್ ಸ್ಪೀಡ್ ನಲ್ಲಿ ಓಡಾಡುತ್ತಿದ್ದಾರೆ,ಅಧಿಕಾರಿಗಳ ಜೊತೆ ಸಭೆ ನಡೆಸೋದು ಗ್ರಾಮಗಳಿಗೆ ಭೇಟಿ ನಿಡೋದು ಅವರ ದಿನಚರಿಯಾಗಿದೆ

ಬೆಳಿಗ್ಗೆ ಸಾಂಬ್ರಾದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಗೋಜಗಾ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿಯ ಸಮಸ್ಯೆ ಆಲಿಸಿ ಬೆಳಗಾವಿಗೆ ಮರಳಿದ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ನೀರಾವರಿ ನಿಗಮದ ಕಚೇರಿಯಲ್ಲಿ ನಿಗಮದ ಮುಖ್ಯ ವ್ಯೆವಸ್ಥಾಪಕರ (MD) ಜೊತೆ ಸಭೆ ನಡೆಸಿದ್ದಾರೆ ಹಿರೇಬಾಗೇವಾಡಿ ಸಿದ್ಧನಬಾವಿ ಸೇರಿದಂತೆ ನಾಲ್ಕು ಗ್ರಾಮಗಳ ಕೆರೆ ತುಂಬಿಸುವ ಕಾಮಗಾರಿ ಶರವೇಗದಲ್ಲಿ ನಡೆಯಬೇಕು ಹೇಗಾದ್ರೂ ಮಾಡಿ ಈ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಸಭೆಯಲ್ಲಿ ಪಟ್ಟು ಹಿಡಿದಿದ್ದಾರೆ

ರಾತ್ರಿ ಎಂಟು ಘಂಟೆಯಿಂದ ಆರಂಭವಾದ ಸಭೆ ಹತ್ತು ಘಂಟೆಯಾದ್ರೂ ಮುಗಿದಿಲ್ಲ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಯ ಪ್ರಸ್ತಾವನೆ ವಾರದಲ್ಲೇ ರೆಡಿಯಾಗಬೇಕು ತ್ವರಿತಗತಿಯಲ್ಲಿ ಸರ್ವೆ ಕಾರ್ಯ ಮುಗಿಸಿ ಯೋಜನೆಯನ್ನು ರೂಪಿಸಬೇಕು ಎಂದು ಹೆಬ್ಬಾಳಕರ ಸಭೆಯಲ್ಲಿ ನೀರಾವರಿ ಎಂ ಡಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ

ಅಭಿವೃದ್ಧಿಯ ಇಚ್ಛಾಶಕ್ತಿ ಇದ್ದರೆ ಏನೆಲ್ಲಾ ಮಾಡಲು ಸಾಧ್ಯ ಎನ್ನುವದಕ್ಕೆ ಲಕ್ಷ್ಮೀ ಹೆಬ್ಬಾಳಕರ ನಿದರ್ಶನ

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *