Breaking News

ಬೆಳಗಾವಿಯ ಕನ್ನಡ ಮೇಯರ್ ಮಾಡುವ ಕನಸಿಗೆ ಯಳ್ಳು ನೀರು.

ಬೆಳಗಾವಿಯ ಕನ್ನಡ ಮೇಯರ್ ಮಾಡುವ ಕನಸಿಗೆ ಯಳ್ಳು ನೀರು..

ಕನ್ನಡಿಗರು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್- ಉಪ ಮೇಯರ್ ಎಂಬ ಆಸೆಗೆ ಕೊನೆಗು ಜನ ಪ್ರತಿನಿಧಿಗಳು ಎಳ್ಳು ನೀರು ಬಿಟ್ಟಿದ್ದಾರೆ. ಸ್ವಪ್ರತಿಷ್ಠೆ, ರಾಜಕೀಯ ಹಿತಾಸಕ್ತಿಗೆ ಮತ್ತೊಮ್ಮೆ ಗಡಿ ಕನ್ನಡಿಗರ ಹಿತಾಸಕ್ತಿ ಬಲಿಯಾಗಿದೆ.

ನಾಳೆ ಪಾಲಿಕೆಯ ಮೂರನೇ ಅವಧಿಯ ಮೇಯರ್- ಉಪಮೇಯರ್ ಚುನಾವಣೆ ನಡೆಯಲಿದೆ. ಈ ಭಾರಿ ಕನ್ನಡಿಗರು ಮೇಯರ್ ಆಗಬೇಕು ಎಂದು ಕನಸಾಗಿತ್ತು. ಈ ಹಿನ್ನಲೆಯಲ್ಲಿ ಅನೇಕ ಚಟುವಟಿಕೆ ನಡೆದಿದ್ದವು. ಇದೀಗ ಕನ್ನಡಿಗರು ಮೇಯರ್ ಆಗುವ ಕನಸಿಗೆ ಇತಿಶ್ರೀಯನ್ನು ರಾಜಕೀಯ ನಾಯಕರು ಹಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಟ್ಟು ೫೮ ಜನ ಸದಸ್ಯರ ಬಲವಿದೆ. ಈ ಪೈಕಿ ೫೭ ಜನ ಸದಸ್ಯರು ಮತದಾರರ ಹಕ್ಕು ಇದೆ. ಕನ್ನಡ ಹಾಗೂ ಉರ್ದು ಸೇರಿ ೨೫ ಜನ ಸದಸ್ಯರಿದ್ದಾರೆ.‌ ಎಂಇಎಸ್ ೩೨ ಜನ ಸದಸ್ಯರಿದ್ದಾರೆ.

ಕನ್ನಡಿಗ ಸದಸ್ಯರಲ್ಲಿ ಎರಡು ಬಣಗಳಾಗಿವೆ ಒಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ ಸೇರಿ ೧೧ ಜನ ಪಾಲಿಕೆ ಸದಸ್ಯರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ೧೫ ಜನ ಸದಸ್ಯರು ಈಗಾಗಲೇ ರೇಸಾರ್ಟ್ ಸೇರಿದ್ದಾರೆ.
ಮೇಯರ್ ಚುನಾವಣೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಬಳಿ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ನಮ್ಮ ಬಳಿ ಈಗಾಗಲೇ ೯ ಜನ ಪಾಲಿಕೆ ಸದಸ್ಯರಿದ್ದಾರೆ. ಇವರೆಗೆ ಕನ್ನಡಿಗರನ್ನು ಮೇಯರ್ ಮಾಡಲು ನಾವು ಬದ್ಧರಿದ್ದೇವೆ. ಆದರೆ ಸಚಿವ ರಮೇಶ ಜಾರಕಿಹೊಳಿ ಎಲ್ಲರನ್ನು ಸೇರಿಸಿ ಸಭೆ ನಡೆಸಿಲ್ಲ. ಮೇಯರ್ ಸ್ಥಾನಕ್ಕೆ ನಮ್ಮ ಬಣದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇನೆ. ಇನ್ನೂ ಮೇಯರ್ ಚುನಾವಣೆಯ ಚಿತ್ರಣ ಸ್ಪಷ್ಟವಾಗಿಲ್ಲ. ಕೆಲವು ಭಿನ್ನಮತಿಯ ಎಂಇಎಸ್ ಗುಂಪು ಅಭ್ಯರ್ಥಿಗಳು ನಮ್ಮನು ಸಂಪರ್ಕಿಸಿದ್ದು ನಿಜ. ಆದರೇ ಅವರು ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಅಭ್ಯರ್ಥಿಗೆ ಜಿಲ್ಲಾ ಉಸ್ತುವಾರಿ ಸಚಿವರ ಬಣ ಬೆಂಬಲಿಸಬೇಕು ಎಂದು ಹೇಳಿದ್ದಾರೆ

ಪಾಲಿಕೆಯಲ್ಲಿ ಕನ್ನಡ ಗುಂಪಿನಲ್ಲಿಯೇ ಒಮ್ಮತ ಮೂಡಿಲ್ಲ ಹಿಗಾಗಿ ಕನ್ನಡದ ಮೇಯರ್ ಆಗುವ ಕನಸಿಗೆ ಯಳ್ಳು ನೀರು ಬಿಟ್ಟಂತಾಗಿದೆ

ಶಾಸಕ ಫಿರೋಜ್ ಮಾತನಾಡಿ, ಪಾಲಿಕೆ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿದೆ‌ ಆದ್ದರಿಂದ ಸಚಿವರು ನಾವು ಮೇಯರ್ ಚುನಾವಣೆಗೆ ನಿಲ್ಲಿಸುವ ಅಭ್ಯರ್ಥಿಗೆ ಬೆಂಬಲ ನೀಡಬೇಕು. ಮೇಯರ್ ಅಭ್ಯರ್ಥಿಯನ್ನು ನಾವು ನಿರ್ಮಾನಿಸುತ್ತೇವೆ ಎಂದರು.

ಸಂಬಾಜಿ ಪಾಟೀಲ ಕಿಂಗ್ ಮೇಕರ್

ಎಂಈಎಸ್ ಸದಸ್ಯರು ಶಾಸಕ ಸಂಬಾಜಿ ಪಾಟೀಲ ಅವರ ಮನೆಯಲ್ಲಿ ಸಭೆ ಸೇರಿ ಮೇಯರ್ ಮಾಡುವ ವಿಚಾರದಲ್ಲಿ ಸಂಬಾಜಿ ಪಾಟೀಲರಿಗೆ ಸರ್ವಾಧಿಕಾರ ನೀಡಿದ್ದಾರೆ ಎಂಈಎಸ್ ಭಿನ್ನಮತೀಯರ ಗುಂಪು ಪ್ರತ್ಯೇಕವಾಗಿ ಸಂಬಾಜಿ ಪಾಟೀಲರನ್ನು ಭೇಟಿಯಾಗಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಿರುವದಾಗಿ ಹೇಳಿದ್ದಾರೆ ಹೀಗಾಗಿ ಎಂಈಎಸ್ ನಲ್ಲಿ ಭಿನ್ನಮತ ಶಮನಗೊಂಡಿದೆ

ಸಂಜೋತಾ ಮೇಯರ್ ಮೀನಾಕ್ಷಿ ಉಪ ಮೇಯರ್?

ಪಾಲಿಕೆಯಲ್ಲಿ ಬಹುಮತ ಹೊಂದಿರುವ ಎಂಈಎಸ್ ಮೇಯರ್ ಸ್ಥಾನಕ್ಕೆ ಸಂಜೋತಾ ಬಾಂಧೇಕರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಉಪ ಮೇಯರ್ ಸ್ಥಾನ ಗುಂಜಟಕರ ಗುಂಪಿನ ಮೀನಾಕ್ಷಿ ಚಿಗರೆ ಅವರಿಗೆ ನೀಡಲು ನಿರ್ಧರಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ದೃಡಪಡಿಸಿವೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *