ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಇನ್ನು ಪ್ರಭುದ್ಧರಾಗಿಲ್ಲ ಗೋಕಾಕ್ ನಲ್ಲಿ ಸ್ಟಂಟ್ ತೋರಿಸಿದ ಹಾಗೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸ್ಟಂಟ್ ತೋರಿಸಿದರೆ ನಡಿಯೋಲ್ಲ,ಅವರು ಸುಧಾರಣೆ ಆಗಲು ಇನ್ನು ಕಾಲಾವಕಾಶ ಇದೆ ಸುಧಾರಿಸಿಕೊಂಡರೆ ಒಳ್ಳೆಯದು ಎಂದು ಮಾಜಿ ಸಚಿವ ಸತೀಶ ಜಾರಕುಹೊಳಿ ಹಶಲಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ
ಸ್ಮಾರ್ಟ ಸಿಟಿ ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ನಾನು ರಾಯಚೂರ ಗ್ರಾಮೀಣ ಕ್ಷೇತ್ರಕ್ಕೆ ಹೋಗುವ ಪ್ರಶ್ನೆ ಇಲ್ಲ ಲಖನ್ ಅವರಿಗೆ ಸ್ಪರ್ದಿಸಲು ಗೋಕಾಕ ಸೇಫ್ ಆಗಿದೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ದೆ ಮಾಡಿದರೆ ಲಖನ್ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಇದೆ ಎಂದು ಸತೀಶ ಜಾರಕಿಹೊಳಿ ಹೇಳಿದರು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನನ್ನ ಆಸ್ತಿ ಇದೆ ಆಸ್ತಿ ಇದ್ದ ಕಡೆಯಿಂದ ಸ್ಪರ್ದೆ ಮಾಡಲು ಸಾಧ್ಯವಿಲ್ಲ ಹಾಲಿ ಶಾಸಕರಿಗೆ ಟಿಕೆಟ್ ಕೊಡುವದು ಕಾಂಗ್ರೆಸ್ ಸಂಪ್ರದಾಯ ನಾನು ಯಮಕನಮರ್ಡಿ ಕ್ಷೇತ್ರವನ್ನು ಬಿಟ್ಡು ಕೊಡುವದಿಲ್ಲ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ