Breaking News
Home / Breaking News / ಸ್ಮಾರ್ಟ ಸಿಟಿಗಾಗಿ ಮತ್ತೊಂದು ಬೈಟಕ್…!

ಸ್ಮಾರ್ಟ ಸಿಟಿಗಾಗಿ ಮತ್ತೊಂದು ಬೈಟಕ್…!

ಬೆಳಗಾವಿ- ಸ್ಮಾರ್ಟ ಸಿಟಿ ಯೋಜನೆ ಬೆಳಗಾವಿ ನಗರದಲ್ಲಿ ಅನುಷ್ಠಾನ ಯಾವಾಗ ಆಗುತ್ತದೆಯೋ ಗೊತ್ತಿಲ್ಲ ಆದರೆ ಈ ಯೋಜನೆ ಘೋಷಣೆ ಆದಾಗಿನಿಂದ ಮಿಟಿಂಗ್ ಮೇಲೆ ಮೀಟಿಂಗ್ ನಡೆಯುತ್ತಿದೆ

ಸೋಮವಾರ ಸಂಸದ ಸುರೇಶ ಅಂಗಡಿ ಅವರ ಅಧ್ಯಕ್ಷತೆಯಲ್ಲಿ ಸ್ಮಾರ್ಟ ಸಿಟಿ ಯೋಜನೆ ಕುರಿತು ಮತ್ತೊಂದು ಬೈಟಕ್ ನಡೆಯಿತು ಈ ಬೈಟಕ್ ದಲ್ಲಿ ಶಾಸಕ ಫಿರೋಜ್ ಸೇಠ,ಶಾಸಕ ಸಂಜಯ ಪಾಟೀಲ  ಮೇಯರ್ ಪಾಲಿಕೆ ಕಮಿಷ್ನರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು

ಕಾಡಾ ಕಚೇರಿಯ ಸಭಾಭವನದಲ್ಲಿ ನಡೆದ ಸಭೆಗೆ ಸ್ಮಾರ್ಟ್ ಸಿಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಮುಲ್ಲಾಲಿ ಮೋಹಿಲನ್ ಅವರು ತಡವಾಗಿ ಆಗಮಿಸಿದ್ದಕ್ಕೆ ಸಂಸದ ಸುರೇಶ ಅಂಗಡಿ ತರಾಟೆಗೆ ತೆಗೆದುಕೊಂಡರು

ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ಯೋಜನೆ ಘೋಷಣೆಯಾಗಿ ವರ್ಷ ಕಳೆದಿದೆ ಇನ್ನುವರೆಗೆ ಕಾಮಗಾರಿ ಆರಂಭವಾಗಿಲ್ಲ ಕಥೆ ಹೇಳಬೇಡಿ ಕೆಲಸ ಮಾಡಿ,ಯೋಜನೆಯ ಅನುದಾನ ಬಿಡುಗಡೆ ಆಗಿದೆ ಕೆಲಸ ಶುರು ಆಗೋದು ಯಾವಾಗ ಎಂದು ಜನ ಕೇಳುತ್ತಿದ್ದಾರೆ.ಎಂದು ಎಲ್ಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

ಶಾಸಕ ಫಿರೋಜ್ ಸೇಠ ಮಾತನಾಡಿ ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಕೇವಲ ಬೋರ್ಡ್ ಗಳು ಕಾಣುತ್ತಿವೆ ಕೆಲಸ ಮಾತ್ರ ನಡೆದಿಲ್ಲ ಈ ಯೋಜನೆಯ ಬಗ್ಗೆ ಜನರ ಇಂಟ್ರೆಸ್ಟ ಕಡಿಮೆ ಆಗಿದೆ ಸ್ಮಾರ್ಟ್ ಸಿಟಿ ಅಧಿಕಾರಿ ಮುಳೈ ಮೊಹಿಲನ್ ಸ್ಥಳಿಯ ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ವರ್ಷಾಂತ್ಯಕ್ಕೆ ರಿಸಲ್ಟ ಹೊರಗೆ ಬರಬೇಕು ಎಂದು ಮುಳೈ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು

ಸಲಹೆ ನೀಡುವಂತೆ ಸತೀಶ ಜಾರಕಿಹೊಳಿ ಅವರನ್ನು ಸಂಸದ ಸುರೇಶ ಅಂಗಡಿ ಕೇಳಿಕೊಂಡಾಗ ಕೆಲಸ ಆರಂಭವಾಗಿಲ್ಲ ನಾನೇನು ಸಲಹೆ ಕೊಡಲಿ ಮೊದಲು ಕೆಲಸ ಆರಂಭ ಮಾಡಲಿ ಎಂದು ಅಧಿಕಾರಿಗಳ ಕಾರ್ಯ ವೈಖರಿ ಕುರಿತು ಅಸಮಾಧಾನ ವ್ಯೆಕ್ತಪಡಿಸಿದರು

ಟಡರ್ ರದ್ದು

ಸ್ಮಾರ್ಟ ಸಿಟಿ ಯೋಜನೆ ಅಡಿಯಲ್ಲಿ ಬೆಳಗಾವಿ ನಗರದ ಮಂಡೊಳ್ಳಿ ರಸ್ತೆ,ಹೆಸ್ಕಾಂ ರಸ್ತೆ ಮತ್ತು ಫೋರ್ಟ ರಸ್ತೆಯನ್ನು ಸ್ಮಾರ್ಟ ರಸ್ತೆಯನ್ನಾಗಿಸಲು ಟೆಂಡರ್ ಕರೆಯಲಾಗಿತ್ತು ಆದರೆ ಇದನ್ನು ರದ್ದು ಮಾಡಿ ಎರಿಯಾ ಬೇಸ್ ಡೆವಲಪ್ ಮಾಡಲು ಸೂಚಿಸಲಾಗಿದೆ ಎಂದು ಸಭೆಯ ನಂತರ ಸುರೇಶ ಅಂಗಡಿ ಸ್ಪಷ್ಟಪಡಿಸಿದರು

 

 

 

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *