ಬೆಳಗಾವಿ – ಕರೋನಾ ಲಾಕ್ ಡೌನ್
ಸಂಕಷ್ಟದ ಸ್ಥಿತಿಯಲ್ಲಿ ಹಲವಾರು ಜನ ವಿವಿಧ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ ಆದ್ರೆ ಕೆಪಿಸಿಸಿ ಸದಸ್ಯ ಮಾಸ್ಟರ್ ಮೈಂಡ ಸತೀಶ್ ಜಾರಕಿಹೊಳಿ ಅವರ ದೂರದೃಷ್ಠಿ,ಅವರು ಮಾಡುತ್ತಿರುವ ಸಹಾಯದ ದೃಷ್ಟಿಕೋನ ನೋಡಿದ್ರೆ ನಿಜವಾಗಿಯೂ ಅವರು ಮಾಸ್ಟರ್ ಮೈಂಡ್ ಅನ್ನೋದು ಖಾತ್ರಿಗಾಗುತ್ತದೆ.
ಸತೀಶ್ ಜಾರಕಿಹೊಳಿ ಅವರ ಆಲೋಚನೆಯೇ ಬೇರೆ,ಅವರು ಹೆಲ್ಪ ಮಾಡುವ ಸ್ಟೈಲೇ ಬೇರೆ ಎನ್ನುವದು,ಯಮಕನಮರಡಿ ಕ್ಷೇತ್ರ ಸುತ್ತಾಡಿ ಅಲ್ಲಿಯ ಜನರನ್ನು ವಿಚಾರಿಸಿದ್ರೆ ,ಅವರು ಯಾವ ಯಾವ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ ಎನ್ನುವದು ಗೊತ್ತಾಗುತ್ತದೆ.
ಕ್ಷೇತ್ರದ ಜನರಿಗೆ ಮಾಸ್ಕ ವಿತರಿಸುವ ನೆಪದಲ್ಲಿ ಹಳ್ಳಿ,ಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸತೀಶ್ ಜಾರಕಿಹೊಳಿ ಇಡೀ ರಾಜ್ಯಕ್ಕೆ ಮಾದರಿಯಾಗುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರೈತರ ಬೆನ್ನೆಲುಬುಯಾಗಿ ನಿಂತಿರುವ ಅವರು, ಯೋಗ್ಯ ದರದಲ್ಲಿ ತರಕಾರಿಗಳನ್ನು ಖರೀದಿಸಿ ಬಡ ಜನರಿಗೆ ವಿತರಿಸಲು ಮುಂದಾಗಿದ್ದಾರೆ.
ಕೊರೋನಾ ಸಂಕಷ್ಟದ ಸ್ಥತಿಯಲ್ಲಿರೈತರು ಬೆಳೆದ ತರಕಾರಿಗಳನ್ನು ಖರೀದಿಸಲು ಯಾರೂ ಮುಂದಾಗದೆ ಇರುವ ಕಾರಣ ಮತ್ತು ಬೇರೆ ರಾಜ್ಯಗಳಿಗೆ ಕಳುಹಿಸಲು ಕೂಡ ಅವಕಾಶ ಇಲ್ಲದ ಕಾರಣ ಶಾಸಕರು ಖುದ್ದಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಯೋಗ್ಯ ಬೆಲೆಯಲ್ಲಿ ತರಕಾರಿ ಖರೀದಿಸಿ ಜನರಿಗೆ ವಿತರಿಸುವ ಕಾರ್ಯ ಮಾಡಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ರೈತರ ತರಕಾರಿಗಳನ್ನು ಖರೀಧಿಸಿ ,ಈ ತರಕಾರಿಯನ್ನು ಕ್ಷೇತ್ರದ ಬಡವರಿಗೆ ಹಂಚಿಕೆ ಮಾಡಲು ತಮ್ಮ ಅಭಿಮಾನಿ ಬಳಕ್ಕೆ ಸೂಚಿಸಿದ್ದಾರೆ.ಸತೀಶ್ ಅವರ ಈ ಕಾರ್ಯದಿಂದ ಕ್ಷೇತ್ರದ ರೈತರು ನಿರಾಳವಾಗಿದ್ದರೆ,ಕ್ಷೇತ್ರದ ಬಡವರ ಮನೆ ಮನೆಗೂ ತರಕಾರಿ ತಲುಪುತ್ತಿದೆ.
ಸತೀಶ್ ಜಾರಕಿಹಳಿ ಅವರ ಅಭಿಮಾನಿ ಹಬೀಬ್ ಶಿಲ್ಲೇದಾರ ಅವರ ಅಂಬಡಗಟ್ಟಿಯ. ಮಾಸ್ಕ ತಯಾರಿ ಘಟಕ
ಸತೀಶ್ ಅಭಿಮಾನಿಗಳಿಂದಲೂ ನೆರವು….
ಕೊರೋನಾ ಸಂಕಷ್ಟದ ಸ್ಥಿತಿಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಗಳು ವಿವಿಧ ರೀತಿಯ ಸಹಾಯ ಮಾಡುತ್ತಿದ್ದಾರೆ ,ಸತೀಶ್ ಅಭಿಮಾನಿ ಹಬೀಬ್ ಶಿಲ್ಲೇದಾರ ಅವರು ತಮ್ಮ ಗಾರ್ಮೆಂಟ್ ಘಟಕವನ್ನು ಮಾಸ್ಕ ತಯಾರಿಕಾ ಕೇಂದ್ರವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.ದಿನನಿತ್ಯ ಸಾವಿರಾರು ಮಾಸ್ಕಗಳನ್ನು ಸಿದ್ಧಪಡಿಸುವ ಇವರು ಜಿಲ್ಲೆಯಾದ್ಯಂತ ಹಂಚುವ ಕೆಲಸ ಮಾಡುತ್ತಿದ್ದಾರೆ.
ಸತೀಶ್ ಅಭಿಮಾನಿ ಮಲಗೌಡ ಪಾಟೀಲ ಮತ್ತು ಸಿದ್ದು ಸುಣಗಾರ ಮತ್ತು ಅವರ ಬಳಗ ಸತೀಶ್ ಜಾರಕಿಹೊಳಿ ಖರೀಧಿಸಿದ ತರಕಾರಿಯನ್ನು ಯಮಕನಮರಡಿ ಕ್ಷೇತ್ರದ ಜನರಿಗೆ ಹಂಚುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.