ಬೆಳಗಾವಿ- ಸಿಂಹ ಜಿಂಕೆ ಕರಡಿ,ಹುಲಿ ನೋಡಬೇಕಾದ್ರೆ ಇನ್ಮುಂದೆ ಮೈಸೂರಿನ ಝೂ ಅಥವಾ ಬನ್ನೇರುಘಟ್ಟ ಕ್ಕೆ ಹೋಗಬೇಕಾದ ಅಗತ್ಯವಿಲ್ಲ ಯಾಕಂದ್ರೆ ಇವತ್ತಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಸಿಂಹ ಘರ್ಜನೆ ಶುರುವಾಗಿದ್ದು ಬಹುತೇಕ ಎಲ್ಲ ಕಾಡು ಮೃಗಗಳನ್ನು ಬೆಳಗಾವಿ ಜಿಲ್ಲೆಯಲ್ಲೇ ನೋಡುವ ಭಾಗ್ಯ ಒದಗಿ ಬಂದಿದೆ.
ಯಮಕನಮರಡಿ ಕ್ಷೇತ್ರದ ಶಾಸಕ ಮಾಜಿ ಸಚಿವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದಾಗಿ,ಯಮಕನಮರಡಿ ಕ್ಷೇತ್ರದಲ್ಲಿರುವ ಭೂತರಾಮನಹಟ್ಟಿಯಲ್ಲಿರುವ ರಾಣಿ ಚೆನ್ನಮ್ಮ ನಿಸರ್ಗದಾಮದಲ್ಲಿ ಈಗಾಗಲೇ ಮೂರು ಸಿಂಹಗಳು ಬಂದಿದ್ದು ಈ ಮೂರು ಸಿಂಹಗಳಲ್ಲಿ ಒಂದನ್ನು ಇವತ್ತಿನಿಂದ ಪಂಜರದಿಂದ ಹೊರಗೆ ಬಿಡಲಾಗಿದ್ದು ಸಾರ್ವಜನಿಕರಿಗೆ ವೀಕ್ಷಿಸಲು ಎಲ್ಲ ರೀತಿಯ ಸೌಲಭ್ಯ ಮಾಡಲಾಗಿದೆ.
ಮೂರು ಸಿಂಹಗಳನ್ನು ಏಕಕಾಲಕ್ಕೆ ಪಂಜರದಿಂದ ಹೊರಗಡೆ ಬಿಟ್ಟರೆ ಜಗಳಾಡಬಹುದು ಎನ್ನುವ ಆತಂಕದಿಂದ ಈಗ ಒಂದು ಸಿಂಹವನ್ನು ಮಾತ್ರ ಪಂಜರದಿಂದ ಸುರಕ್ಷಿತ ವಲಯಕ್ಕೆ ಬಿಡಲಾಗುತ್ತಿದೆ.ನಾಲ್ಕು ದಿನಗಳಲ್ಲಿ ಮೂರು ಸಿಂಹಗಳು ಪಂಜರದದ ಹೊರಗೆ ಬಂದು ಸಾರ್ವಜಿಕರ ವೀಕ್ಷಣೆಗೆ ಲಭ್ಯವಾಗಲಿವೆ.
ಈಗ ಸದ್ಯಕ್ಕೆ ಬೆಳಗಾವಿ ಪಕ್ಕದ ಭೂತರಾಮನಹಟ್ಟಿ ಗ್ರಾಮದ ರಾಣಿ ಚನ್ನಮ್ಮ ಝೂ ನಲ್ಲಿ ಸಿಂಹ,ಮತ್ತು ಜಿಂಕೆಗಳಿದ್ದು ಮುಂದಿನ ಎರಡು ವಾರಗಳಲ್ಲಿ ಹುಲಿ,ಮತ್ತು ಚಿರತೆ ,ಕರಡಿಗಳು ಬರಲಿವೆ.
ಮುಂದಿನ ದಿನಗಳಲ್ಲಿ ಭೂತರಾಮನಹಟ್ಟಿ ಗ್ರಾಮದ ನಿಸರ್ಗದಾಮ ಒಳ್ಳೆಯ ಪಿಕ್ ನಿಕ್ ಸ್ಪಾಟ್ ಆಗೋದು ಗ್ಯಾರಂಟಿ,ಬೆಳಗಾವಿಯಲ್ಲಿ ಪ್ರಾಣಿ ಸಂಗ್ರಹಾಲಯ ಶುರು ಮಾಡುವ ಯೋಜನೆಯನ್ನು ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಪಾಟೀಲ ರೂಪಿಸಿದ್ದರು.ಈ ಯೋಜನೆಯನ್ಮು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅನುಷ್ಠಾನ ಮಾಡಿದ್ದು ವಿಶೇಷ.