ಬೆಳಗಾವಿ ಜಿಲ್ಲೆಗೆ ಕಾಲಿಟ್ಟ ಬೆಳಗೋ ಬೇಕರಿ…!!
ಬೇಕರಿ ಪ್ರೋಡಕ್ಟ್ ಗಳನ್ನು ಮಾರಾಟ ಮಾಡಲು ಬೆಳಗಾವಿ ಜಿಲ್ಲೆಯಲ್ಲಿ ಡಿಸ್ಟಿಬ್ಯಟರ್ ಗಳು ಬೇಕಾಗಿದ್ದಾರೆ.
ಸಂಪರ್ಕಿಸಿ..9538876488
ಬೆಳಗಾವಿ-ಜಾರಕಿಹೊಳಿ ಬ್ರದರ್ಸ್ ಗೆ ಸರ್ಕಾರ ಬೀಳಿಸುವ ಶಕ್ತಿ ಇದೆ ಎಂದು ಜನ ಹೇಳ್ತಾರೆ,ಆದ್ರೆ ನಾಲ್ಕೂ ಜನಕ್ಕೆ ಬೇರೆ,ಬೇರೆ ರೀತಿಯ ಶಕ್ತಿ ಇದೆ,ಆದ್ರೆ ಸರ್ಕಾರ ಬೀಳಿಸುವ ಶಕ್ತಿ ಕೇವಲ ರಮೇಶ್ ಜಾರಕಿಹೊಳಿ ಅವರಿಗೆ ಮಾತ್ರ ಇದೆ,ಎಂದು ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿ ಅವರ ಕಾಲೆಳೆದಿದ್ದಾರೆ.
ಗೋಕಾಕ್ ನಗರದಲ್ಲಿ ನಡೆದ ಉಪ್ಪಾರ್ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಅವರು,ನಾವು ನಾಲ್ಕು ಜನ ಒಂದೇ ಎಂದು ಕನಫ್ಯುಸ್ ಮಾಡ್ಕೋಬೇಡಿ,ನಾವು ಬೇರೆಬೇರೆಯಾಗಿದ್ದೇವೆ.ನಾಲ್ಕೂ ಜನಕ್ಕೆ ಬೇರೆ ರೀತಿಯ ಶಕ್ತಿ ಇದೆ.ಸರ್ಕಾರ ಬೀಳಿಸುವ ಶಕ್ತಿ ಕೇವಲ ರಮೇಶ್ ಜಾರಕಿಹೊಳಿ ಅವರಿಗೆ ಮಾತ್ರ ಇದ್ದು,ಅವರು ಇನ್ನೊಮ್ಮೆ ಸರ್ಕಾರ ಬೀಳಿಸಲಿ ಎಂದು ಪ್ರಾರ್ಥನೆ ಮಾಡ್ತೀವಿ ಎಂದು ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಕುರಿತು ವ್ಯಂಗ್ಯವಾಡಿದ್ದಾರೆ.
ಸತೀಶ್ ಜಾರಕಿಹೊಳಿ ಆಗಾಗ್ಗೆ ರಮೇಶ್ ಜಾರಕಿಹೊಳಿ ಅವರ ಕುರಿತು ವ್ಯಂಗ್ಯ ಮಾಡ್ತಾರೆ,ಆದ್ರೆ ನಾವು ನಾಲ್ಕು ಜನ ಒಂದೇ ಎಂದು ಕನಫ್ಯುಸ್ ಮಾಡ್ಕೋಬೇಡಿ,ಎಂದು ಬೆಳಗಾವಿ ಜಿಲ್ಲೆಯ ಜನತೆಗೆ ಸತೀಶ್ ಸ್ಪಷ್ಟಣೆ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
