ಬೆಳಗಾವಿ: ಕರ್ನಾಟಕ ಮರಾಠಾ ಮಹಾಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನೆ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳವಾರ ನಡೆಯಿತು.
ಪ್ರವರ್ಗ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೊಂಡಸಕೊಪ್ಪ ಬಳಿ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಸತೀಶ್ ಜಾರಕಿಹೊಳಿ ವೇದಿಕೆಗೆ ಬಂದಿದ್ದರು.
ಸತೀಶ್ ಜಾರಕಿಹೊಳಿ ಮಾತನಾಡಲು ಬಂದಾಗ, ಮರಾಠಾ ಸಮುದಾಯದ ಬಗ್ಗೆ ಹಿಂದೂ ದರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಹೀಗಾಗಿ ಭಾಷಣ ಬೇಡ ಎಂದು ಪ್ರತಿಭಟನಾ ನಿರತ ಮರಾಠಾ ಸಮುದಾಯದ ಕೆಲವರು ಅಡ್ಡಿಪಡಿಸಿದರು. ಜೈ ಶಿವಾಜಿ ಜೈ ಭವಾನಿ ಎಂದು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದರು
ವಿರೋಧದ ನಡುವೆ ಜಾರಕಿಹೊಳಿ ಕೆಲ ಕಾಲ ತಡೆದು, ನಂತರ ಭಾಷಣ ಮುಗಿಸಿದರು. ನಂತರ ಮಾದ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಮರಾಠಾ ಸಮುದಾಯದವರು ಮೀಸಲಾತಿಗಾಗಿ ಹೋರಾಟ ನಡೆಸಿದ್ದರು ಅವರಿಗೆ ಬೆಂಬಲಿಸಲು ಬಂದಿದ್ದೆ.ನಾಯಕ ಅಂದ್ಮೇಲೆ ಜಿಂದಾಬಾದ್ ಮುರ್ದಾಬಾದ್ ಎರಡನ್ನೂ ಎದುರಿಸಬೇಕು.ನಾನು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಗಲಿ ಸಂಬಾಜಿ ಮಹಾರಾಜರ ಬಗ್ಗೆ ಆಗಲಿ ಕೆಟ್ಟದ್ದಾಗಿ ಮಾತಾಡಿಲ್ಲ.ನಾನು ನಿಪ್ಪಾಣಿಯಲ್ಲಿ ಮಾತನಾಡಿದ ವಿಡಿಯೋ ಇದೆ ಅದನ್ನು ನೋಡಬಹುದು ಎಂದು ಸತೀಶ್ ಜಾರಕಿಹೊಳಿ ಹೇಳುದ್ರು