Breaking News

ಅವರು ಏನ್ ಕೇಳ್ತಾರೆ ನಾವು ಹೆಲ್ಪ್ ಮಾಡಲಿಕ್ಕೆ ರೆಡಿ ಇದ್ದೇವೆ.- ಸಾಹುಕಾರ್

ಬೆಳಗಾವಿ-ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಾದ ಹಿನ್ನಲೆಯಲ್ಲಿಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ,ಕಮೀಟಿಯ ಸದಸ್ಯರಿಗೆ ಸಾಂತ್ವನ ಹೇಳಿದ್ರುಕಾಮಕುಮಾರ ನಂದಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಆಶ್ರಮದ ಟ್ರಸ್ಟಿಗಳ ಬಳಿ ಮಾತುಕತೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪ್ರಕರಣದ ತನಿಖೆ ಕುರಿತು ಸಚಿವರಿಗೆ ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರು ಮಾಹಿತಿ ನೀಡಿದ್ರು.ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಆಶ್ರಮದ ಕಮಿಟಿಯವರ ಜೊತೆ ಮಾತನಾಡಬೇಕಿತ್ತು, ಮಾತುಕತೆ ನಡೆಸಿದ್ದೇನೆ.ಈಗಾಗಲೇ ನಮ್ಮ ಗೃಹಸಚಿವರು ಭೇಟಿ ನೀಡಿದ್ದಾರೆ,ಸರ್ಕಾರ ಸಹ ಪ್ರಕರಣ ಬಗ್ಗೆ ಸಾಕಷ್ಟು ಗಮನ ಹರಿಸಿದೆ,ನಮ್ಮ ಪೊಲೀಸರು ಸಹ ಎರಡ್ಮೂರು ದಿನಗಳಲ್ಲಿ ಪ್ರಕರಣ ಬೇಧಿಸಿದ್ದಾರೆ.ಈ ರೀತಿಯ ಘಟನೆ ನಮ್ಮ ಜಿಲ್ಲೆಯಲ್ಲಾಗಿದ್ದು ಎಲ್ಲರಿಗೂ ದುಃಖ ತರುಚ ವಿಚಾರ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.

ಇಂತಹ ಘಟನೆ ಆಗಬಾರದು ಅಂತಾ ಅಷ್ಟೇ ನಾವು ನಿಗಾ ವಹಿಸಬೇಕಾಗುತ್ತದೆ.ಸ್ವಾಮೀಜಿ ಬರ್ಬರ ಹತ್ಯೆಯನ್ನ ಎಲ್ಲಾ ಪಕ್ಷಗಳು, ಇಡೀ ರಾಜ್ಯ ಖಂಡಿಸಿದೆ.ಮುಂದೆ ಈ ಮಠಕ್ಕೆ ಸರ್ಕಾರದಿಂದ, ನಮ್ಮಿಂದ ಏನು ಮಾಡಬೇಕೆಂದು ಚರ್ಚೆ ಮಾಡಿದ್ದೇನೆ.ಆಶ್ರಮದ ಟ್ರಸ್ಟ್ ಇದೆ ಸಭೆ ಮಾಡ್ತೀವಿ ಅಂದಿದ್ದಾರೆ.ಸಭೆಯಾದ ಮೇಲೆ ಅವರು ಏನ್ ಕೇಳ್ತಾರೆ ನಾವು ಹೆಲ್ಪ್ ಮಾಡಲಿಕ್ಕೆ ರೆಡಿ ಇದ್ದೇವೆ.ಎರಡೇ ದಿನಗಳಲ್ಲಿ ಮೇಜರ್ ತನಿಖೆ ಮುಗಿದಿದೆ.ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರು ತನಿಖೆ ಮಾಡ್ತಿದ್ದಾರೆ.ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ರು.

ವಿಪಕ್ಷ ಆರೋಪ ಮಾಡುವ ಹಾಗೇ ಏನಾದರೂ ಇದ್ರೆ ಅದನ್ನೂ ತನಿಖೆ ಮಾಡ್ತಿದ್ದಾರೆ.ಆದಷ್ಟು ಬೇಗ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡ್ತಾರೆಜೈನಮುನಿ ಹತ್ಯೆ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ ವಿಚಾರ,ಸಿಬಿಐ ತನಿಖೆ ಏನು ಅವಶ್ಯಕತೆ ಇಲ್ಲ ಆರೋಪಿಗಳು ಸಿಕ್ಕಿಲ್ಲ, ಸ್ಟೋರಿ ಮುಚ್ಚಿಟ್ಟಿದ್ದಾರಂದ್ರೆ ಅದು ಬೇರೆ,ಪ್ರಕರಣ ಬಗ್ಗೆ ಈಗಾಗಲೇ ಪೊಲೀಸರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಈಗಾಗಲೇ ಸದನದಲ್ಲಿ ಗೃಹಸಚಿವರು ನಮ್ಮ ಪೊಲೀಸರು ಸಮರ್ಥರಿದ್ದಾರೆ ಎಂದಿದ್ದಾರೆ.ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆ ಇಲ್ಲ. ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.

ಎಫ್ಐಆರ್‌ನಲ್ಲಿ ಅವರ ಇಬ್ಬರ ಹೆಸರು ಬಂದಿದೆ, ಮುಚ್ಚಿಡುವ ಪ್ರಶ್ನೆ ಇಲ್ಲ.ಬಿಜೆಪಿಯವರ ಆರೋಪ ಬಗ್ಗೆ ನಮಗೇನೂ ತಿಳಿಯುತ್ತಿಲ್ಲ.ಬಿಜೆಪಿಯವರು ಇದೊಂದೇ ಅಂತಲ್ಲ ಎಲ್ಲದರಲ್ಲೂ ರಾಜಕಾರಣ ಮಾಡ್ತಾರೆ.ಬಿಜೆಪಿ ನಾಯಕರು ಸತ್ಯಶೋಧನಾ ಸಮಿತಿ ಮಾಡಿ ಭೇಟಿ ನೀಡಿದ ವಿಚಾರ,ಮಾಡಲಿ ಯಾರು ಬೇಡ ಅಂದಿದ್ದಾರೆ, ಅವರು ಒಂದು ರಿಪೋರ್ಟ್ ಕೊಡಲಿ,ಅವರ ಬಳಿ ಏನಾದರೂ ಹೆಚ್ಚಿನ ಮಾಹಿತಿ ಇದ್ರೆ ಹಂಚಿಕೊಳ್ಳಲಿ,ಹೀಗಿದೆ ಅಂತಾ ಪೊಲೀಸರಿಗೆ ಹೇಳಿದ್ರೆ ಅವರು ತನಿಖೆ ಮಾಡ್ತಾರೆ ಎಂದ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು.

*ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಸಚಿವ ಸತೀಶ್ ಜಾರಕಿಹೊಳಿ*

ಇಸ್ರೋ ಸ್ಥಾಪನೆಯಾಗಿದ್ದು ಸುಮಾರು 30 ವರ್ಷಗಳ ಹಿಂದೆ,ಇಂದಿರಾಗಾಂಧಿ ಕಾಲದಿಂದಲೂ ಸಾಕಷ್ಟು ಮಾಡಿದ್ದೇವೆ.ಇಲ್ಲಿಯವರೆಗೆ ‌ಮೋದಿಯವರ
ಕಾಲದವರೆಗೂ ಇದ್ದೇ ಇದೆ.ವಿಜ್ಞಾನಿಗಳು ಹೊಸ ಹೊಸ ಸೆಟ್‌ಲೈಟ್ ಮಾಡಿಯೇ ಮಾಡ್ತಾರೆ, ಯಶಸ್ವಿಯಾಗಿದ್ದು,35 ವರ್ಷದ ಹಿಂದೆ ಮೊದಲ ಬಾರಿ ಆರ್ಯಭಟ ಯಶಸ್ವಿಯಾಗಿತ್ತು.ಅಲ್ಲಿಂದ ಇಲ್ಲಿಯವರೆಗೆ ಇಸ್ರೋ ನಮ್ಮ ಹೆಮ್ಮೆಯ ಸಂಸ್ಥೆ ಆಗಿದೆ.

ಆಯಾ ಕಾಲದ ಪ್ರಧಾನಿಗಳು ಸರ್ಕಾರಗಳು ಯಶಸ್ವಿಯಾಗಿದ್ದಾರೆ,ಇವತ್ತೂ ಯಶಸ್ವಿಯಾಗಿದೆ, ನಮ್ಮ ವಿಜ್ಞಾನಿಗಳನ್ನ ಹೊಗಳಬೇಕಾಗುತ್ತೆ, ಎಂದುಹಿರೇಕೋಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *