ಬೆಳಗಾವಿ- ಶನಿವಾರ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ ಇಲ್ಲಿ ಯಾವ ಗುಂಪಿಗೂ ಸ್ಪಷ್ಠ ಬಹುಮತ ಇಲ್ಲದಿರುವದರಿಂದ ಯಾರು ಜಾಕ್ ಪಾಟ್ ಹೊಡೆಯಬಹುದು,ಅಧಿಕಾರದ ಗದ್ದುಗೆ ಯಾರು ಏರಬಹುದೆಂಬ ವಿಷಯ ಕುತೂಹಲ ಕೆರಳಿಸಿದೆ
ಇಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಕೈಗೊಳ್ಳುವ ನಿರ್ಧಾರ ನಿರ್ಣಾಯಕ ಎಂದು ಹೇಳಲಾಗುತ್ತಿದೆ
ಸತೀಶ ಜಾರಕಿಹೊಳಿ ಅವರ ಗುಂಪಿನ ಆರು ಜನ ಸದಸ್ಯರು ಈಗಾಗಲೇ ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳಲಾಗಿದ್ದು ಅವರು ಶನಿವಾರ ಬೆಳಗಾವಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ
ಬೆಳಗಾವಿ ಎಪಿಎಂಸಿ ಯಲ್ಲಿ ಅಧಿಕಾರದ ಗದ್ದುಗೆ ಏರಲು ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಹಾಲಿ ಸಚಿವ ರಮೇಶ ಜಾರಕಿಹೊಳಿ ಅವರ ನಡುವೆ ಜಿದ್ದಾಜಿದ್ದಿಯ ಕಸರತ್ತು ನಡೆದಿದೆ ಎನ್ನಲಾಗಿದೆ
ಬೆಳಗಾವಿ ಎಪಿಎಂಸಿ ಯಲ್ಲಿ ಕಾಂಗ್ರೆಸ್ ನಲ್ಲಿಯೂ ಎರಡು ಗುಂಪುಗಳಾಗಿವೆ,ಎಂಈಎಸ್ ನಲ್ಲಿಯೂ ಎರಡು ಗುಂಪುಗಳಾಗಿವೆ ಬಿಜೆಪಿ ಯಾರ ಜೊತೆ ಕೈ ಜೋಡಿಸುತ್ತದೆಯೋ ಅವರು ಅಧ್ಯಕ್ಷ ಗಾದಿ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ
ಫೆ ೧೮ ರಂದು ಬೆಳಗಾವಿ ಎಪಿಎಂಸಿಯಲ್ಲಿ ಅಧಿಕಾರ ಹಿಡಿಯಲು ರಾಜಕೀಯ ಸಂಘರ್ಷ ನಡೆಯುವ ಲಕ್ಷಣಗಳು ಕಂಡು ಬಂದಿವೆ
ಮಾಜಿ ಮಂತ್ರಿಗಳ ಮಾತು ಕೇಳಬೇಕೋ ಅಥವಾ ಹಾಲಿ ಮಂತ್ರಿಗಳ ಮಾತು ಕೇಳಬೇಕೋ ಎನ್ನುವದು ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಗೊಂದಲ ಉಂಟು ಮಾಡಿದೆ
ಹಿರಿಯ ಕಾಂಗ್ರೆಸ್ಸಿಗ ಯುವರಾಜ ಕದಂ ಅವರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷದ ಎರಡೂ ಗುಂಪುಗಳಲ್ಲಿ ಅಭಿಪ್ರಾಯ ಮೂಡಿದೆ ಆದರೆ ಅದಕ್ಕೆ ಸತೀಶ ಜಾರಕಿಹೊಳಿ ಅಸ್ತು ಎನ್ನುವದಷ್ಟೇ ಬಾಕಿ ಉಳಿದಿದೆ