Breaking News

ಮಾರ್ಚ 1 ರಂದು ಬೆಳಗಾವಿ ಮೇಯರ್ ಚುನಾವಣೆ

ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ
ಹುದ್ದೆಗಳಿಗೆ ಚುನಾವಣೆ
ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ 19ನೇ ಅವಧಿಗೆ ಮಹಾಪೌರ ಮತ್ತು ಉಪಮಹಾಪೌರ ಹುದ್ದೆಗಳಿಗೆ ಮಾರ್ಚ 1 ರಂದು ಬೆಳಗಾವಿ ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಜರುಗಿಸಲಾಗುವದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆ ಹಾಗೂ ಪ್ರಾದೇಶಿಕ ಆಯುಕ್ತರಾದ ಶ್ರೀ ಎನ್ ಜಯರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಯನ್ನು ಮಾರ್ಚ 1 ರಂದು ಮಧ್ಯಾಹ್ನ 1 ಗಂಟೆಗೆ ನಡೆಸಲಾಗುವುದು. ಮಹಾಪೌರ ಹುದ್ದೆಗೆ ಹಿಂದುಳಿದ ವರ್ಗ “ ಅ” (ಮಹಿಳೆ) ಹಾಗೂ ಉಪಮಹಾಪೌರ ಹುದ್ದೆಗೆ (ಸಾಮಾನ್ಯ) ಮೀಸಲಾತಿಗೆ ಚುನಾವಣೆ ಜರುಗಲಿದೆ.

ಚುನಾವಣೆ ವೇಳಾಪಟ್ಟಿ:-
ಮಾರ್ಚ 1 ರಂದು ಮುಂಜಾನೆ 10 ಗಂಟೆಯಿಂದ 11 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಸಭೆ ಪ್ರಾರಂಭ, ಮಧ್ಯಾಹ್ನ 1 ಗಂಟೆಯ ನಂತರ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆ ಹಾಗೂ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ.ನಾನು ಆಂಕಾಂಕ್ಷಿಯೂ ಅಲ್ಲ,ಸ್ಪರ್ದೆಯೂ ಮಾಡೋದಿಲ್ಲ…

ಬೆಳಗಾವಿ-ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ …

Leave a Reply

Your email address will not be published. Required fields are marked *