ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಶೀಘ್ರದಲ್ಲಿ ಚಲನಚಿತ್ರವನ್ನು ನಿರ್ಮಿಸಲಾಗುವುದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಕುಂಟ ಕೋಣ ಮೂಕ ಜಾಣ ನಾಟಕದ 100ನೇ ಪ್ರದರ್ಶನ ಸಮಾರಂಭದಲ್ಲಿ ಪಾಲ್ಗೊಂಡು ಘೋಷಣೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಕೈ ಬಿಟ್ಟು ರಮೇಶ್ ಜಾರಕಿಹೊಳಿಗೆ ಅವಕಾಶ ನೀಡಲಾಗಿತ್ತು. ಇದಾದ ನಂತರ ಸತೀಶ್ ಜಾರಕಿಹೊಳಿ ಎಲ್ಲಿಯೂ ಸಿಎಂ ಹಾಗ ವರಿಷ್ಠರ ವಿರುದ್ಧ ಮಾತನಾಡಿರಲಿಲ್ಲ. ಇದೀಗ ಚಲನಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಇನ್ನೂ ನಾಟಕದ 100ನೇ ದಿನದ ಪ್ರಯೋಗದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖ ಕಂಬಾರ ಹಾಗೂ ಎಸ್ಪಿ ರವಿಕಾಂತೇಗೌಡ ಪಾಲ್ಗೊಂಡಿದ್ದರು. ಇನ್ನೂ ಪಂಚಾಕ್ಷರಿ ನಾಟ್ಯ ಸಂಘ ಜೇವರ್ಗಿಗೆ ಶಾಸಕ ಸತೀಶ್ ಜಾರಕಿಹೊಳಿ 1 ಲಕ್ಷ ರೂಪಾಯಿಯನ್ನು ಸಹಾಯಧನ ನೀಡಿದ್ರು. ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅವಶ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು
