ಬೆಳಗಾವಿ- ಭಾನುವಾರ ರಜೆಯ ದಿನವಾಗಿತ್ತು ಈ ದಿನ ಮಾಜಿ ಶಾಸಕ ಅಭಯ ಪಾಟಿಲರು ಶ್ರೀ ಕೃಷ್ಣ ಜನ್ಮಾಷ್ಠಮಿಯಿ ನಿಮಿತ್ಯ ಹಮ್ಮಿಕೊಂಡಿದ್ದ ಕೆಸರಿನ ಗೆದ್ದೆ ಓಟ,ಹಗ್ಗ ಜಗ್ಗಾಟ.ಮಹಿಳೆಯರ ಗದ್ದೆ ಓಟ,ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ,ಫುಟ್ಬಾಲ್,ಸೇರಿದಂತೆ ವಿವಧ ಸ್ಪರ್ದೆಗಳು ನಡೆದವು.ಕಳೆದ ಒಂದು ತಿಂಗಳಿನಿಂದ ಹದ ಮಾಡಿ ಇಡಲಾಗಿದ್ದ ಗದ್ದೆಯಲ್ಲಿ ಬೆಳಗಾವಿ ಜನ ಎಂಜಾಯ್ ಮಾಡಿದ್ದೇ ಮಾಡಿದ್ದು
ಆರಂಭದಲ್ಲಿ ಜ್ಯುನಿಯರ್ ವಿಭಾಗದ ಕೆಸರಿನ ಗೆದ್ದೆ ಓಟ ನಡೆಯಿತು ಇದರಲ್ಲಿ ಬೆಳಗಾವಿ ನಗರದ ಪ್ರಥಮೇಶ ಪಾಟಿಲ ಮೊದಲ ಸ್ಥಾನ ಪಡೆದರೆ ಎರಡನೇಯ ಸ್ಥಾನವನ್ನು ಶ್ರೇಯಸ್ ಕಣಬರಕರ ಅವರು ಪಡೆದರು. ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಂಕೇತ ಸಾಯಿನಾಚೆ, ಎರಡನೇಯ ಸ್ಥಾನವನ್ನು ಸುರೇಂದ್ರ ದೇಸಾಯಿ, ಮೂರನೇಯ ಸ್ಥಾನವನ್ನು ಅಮಯ ರಾನೋಜಿ ಪಡೆದರು
ನಂತರ ನಡೆದ ಹಗ್ಗ ಜಗ್ಗಾಟಟದ ಸ್ಪರ್ದೆಯಲ್ಲಿ ಮೊದಲನೇಯ ಸುತ್ತಿನಲ್ಲಿ ರಾಣಿ ಚನ್ನಮ್ಮ ನಗರದ ಹುಡುಗರ ತಂಡ ಹಾಗು ಮರಾಠಾ ಯುವಕ ಮಂಡಳದ ತಂಡ ಬೆಳಗಾವಿ ದಕ್ಷಿಣ ಹುಡುಗರ ತಂಡ, ಶಿರಾಮ ಸೇನೆ ತಂಡಗಳ ನಡುವೆ ಸೆಣಸಾಟ ನಡೆಯಿತು ಕೊನೆಗೆ ಬೆಳಗಾವಿ ದಕ್ಷಿಣ ಹಾಗು ಶ್ರೀರಾಮ ಸೇನೆ ನಡುವೆ ನಡೆದ ಅಂತಿಮ ಸೆಣಸಾಟದಲ್ಲಿ ಶ್ರೀರಾಮ ಸೇನೆ ಹುಡುಗರು ಜಯಭೇರಿ ಸಾಧಿಸಿದರು
ಇದಾದ ಬಳಿಕ ದಹಿ ಹಂಡಿ ಸ್ಪರ್ದೆ ಹಾಗು ಪುಟ್ಬಾಲ್ ಸ್ಪರ್ದೆ ಮತ್ತು ಮಹಿಳೆಯರ ಕೆಸರಿನ ಗೆದ್ದೆ ಓಟ ಎಲ್ಲರ ಗಮನ ಸೆಳೆಯಿತು ಮಹಿಳೆಯರು ಮಕ್ಕಳು ಯುವಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ಥೋಮ ಕೆಸರಿನ ಆಟ ನೋಡಿ ಭರಪೂರ್ ಎಂಜಾಯ್ ಮಾಡಿದರು ಹರ..ಹರ.. ಮಹಾದೇವ ಎಂದು ಘೋಷಣೆಗಳನ್ನು ಕೂಗುವದರ ಮೂಲಕ ಸ್ಪರ್ದಾಳುಗಳನ್ನು ಪ್ರೋತ್ಸಾಹಿಸುವ ದೃಶ್ಯ ಸಾಮಾನ್ಯವಾಗಿತ್ತು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಕಾರ್ಯಕ್ರಮದ ರೂವಾರಿ ಮಾಜಿ ಶಾಸಕ ಅಭಯ ಪಾಟಿಲ ಮಾತನಾಡಿ ಶೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಕೆಸರಿನ ಗದ್ದೆಯಲ್ಲಿ ಆಯೋಜಿಸಲಾದ ವಿವಿಧ ಸ್ಪರ್ದೆಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ ನಗರದ ನೂರಾರು ಜನ ಯುವಕರ ಸ್ಪರ್ದೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ ಜನರಿಂದ ಜನರಿಗೋಸ್ಕರ ನಡೆದ ಈ ಕಾರ್ಯಕ್ರಮವನ್ನು ಜನರೇ ಯಶಸ್ವಿಗೊಳಿಸಿದ್ದಾರೆ ಎಂದು ಅಭಯ ಪಾಟಿಲ ಹೇಳಿದರು
Check Also
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…
ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …