Breaking News

ಸೇವಾದಳ ಅಕಾಡೆಮಿ ತರಬೇತಿ ಕೇಂದ್ರ ನಿರ್ಮಿಸಿ ರಾಷ್ಟ್ರದ ಗಮನ ಸೆಳೆದ ಸತೀಶ್ ಸಾಹುಕಾರ್….

ಬೆಳಗಾವಿ: ಬೆಳಗಾವಿ ಜಿಲ್ಲೆಯ ಘಟಪ್ರಭಾ ಭಾರತದ ಭೂಪಟದಲ್ಲಿ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸ್ವಾತಂತ್ರ್ಯಸೇನಾನಿ ಡಾ.ನಾ.ಸು.ಹರ್ಡಿಕರ ಸೇವಾದಳ ತರಬೇತಿ ಅಕಾಡೆಮಿಯ ರಾಷ್ಟ್ರಮಟ್ಟದ ತರಬೇತಿ ಕೇಂದ್ರದ ಬೃಹತ್ ಕಟ್ಟಡ ತಲೆ ಎತ್ತಿನಿಂತಿದ್ದು, ಮುಂಬರುವ ಅಕ್ಟೋಬರ ೨ರ ಮಹಾತ್ಮ ಗಾಂಧೀಜಿಯವರ ಜಯಂತಿ ದಿನದಂದೇ ಈ ತರಬೇತಿ ಕೇಂದ್ರದ ಕಟ್ಟಡ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ.

ಈ ತರಬೇತಿ ಕೇಂದ್ರ ಕಾಂಗ್ರೆಸ್ ಪಕ್ಷದ ತತ್ವ,ಸಿದ್ದಾಂತದ ಜೊತೆಗೆ ಶಿಸ್ತಿನ ತರಬೇತಿಯ ಪ್ರಮುಖ ಭಾಗವಾಗಲಿದೆ. ಕಾಂಗ್ರೆಸ್ ಸೇವಾದಳದ ಪುನಶ್ಚೇತನಕ್ಕೆ ಈ ಕೇಂದ್ರ ನಾಂದಿಹಾಡಲಿದೆ. ದೇಶದ ಮೂಲೆಮೂಲೆಗಳಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಮೂಲ ತತ್ವ,ಸಿದ್ದಾಂತಗಳ ಕುರಿತು ತರಬೇತಿ ನೀಡಲು ಸಜ್ಜಾಗಿದೆ. ಕಾಂಗ್ರೆಸ್ ಪಕ್ಷದ ಸಂಘಟನೆಗೂ ಒತ್ತು ನೀಡಲಿದೆ. ಕಾಂಗ್ರೆಸ್ ಪಕ್ಷದ ಪವಿತ್ರಸ್ಥಾನವಾಗಲಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೂ ಉದ್ಘಾಟನೆಗೆ ಆಹ್ವಾನವನ್ನೂ ನೀಡಲಾಗಿದೆ.
ಸೇವಾದಳದ ಸಂಸ್ಥಾಪಕ ಡಾ.ನಾ.ಸು.ಹರ್ಡಿಕರ ಅವರು ತಮ್ಮ ಸಾರ್ವಜನಿಕ ಜೀವನದ ಬಹುಭಾಗವನ್ನು ಘಟಪ್ರಭದಲ್ಲೇ ಕಳೆದಿದ್ದಾರೆ. ಸೇವಾ ದಳದ ಸ್ವಯಂಸೇವಾಕರು ಮತ್ತು ಕಾರ್ಯಕರ್ತರಿಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ತರಬೇತಿ ನೀಡಲಿದೆ. ಡಾ.ಹರ್ಡಿಕರ ಮತ್ತು ಅವರ ಗೆಳೆಯರು ಸೇರಿ ೧೯೩೦ರಲ್ಲಿ ಘಟಪ್ರಭಾದಲ್ಲಿ ಸ್ಥಾಪಿಸಿದ ಕರ್ನಾಟಕ ಆರೋಗ್ಯ ಸಂಸ್ಥೆಯ ಚಾರಿಟಿ ಆಸ್ಪತ್ರೆಯ ಪಕ್ಕದಲ್ಲೇ ತರಬೇತಿ ಕೇಂದ್ರವಿದೆ.
ಅಕಾಡೆಮಿಯ ತರಬೇತಿ ಕೇಂದ್ರದ ಕಟ್ಟಡ ಬಹುತೇಕ ಪೂರ್ಣಗೊಂಡಿದೆ.

ಕ್ಯಾಂಪಸ್‌ನಲ್ಲಿ ಒಂದು ಬೃಹತ್ ಸಭಾಭವನ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯಗಳು ಹಾಗೂ ಆಡಳಿತದ ಕಚೇರಿ ಕಟ್ಟಡ ಇದೆ. ಅಡಿಗೆ ಕೋಣೆ ಹಾಗೂ ಊಟದ ಕೊಠಡಿಗಳು ಇವೆ. ವಿಶಾಲವಾದ ಐದು ಎಕರೆ ಕ್ಯಾಂಪಸ್‌ನಲ್ಲಿ ೬೦೦ ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಮುಖ್ಯ ಕಟ್ಟಡದ ಮೇಲ್ಫಾವಣಿಯು ಸೇವಾ ದಳದ ಸದಸ್ಯರು ಧರಿಸಿರುವ ಗಾಂಧಿ ಟೊಪ್ಪಿಗೆಯನ್ನು ಹೋಗುತ್ತದೆ.
ಕಾಂಗ್ರೆಸ್ ಸಂಘಟನೆಗೆ ಟೊಂಕಕಟ್ಟಿನಿಂತ ಸತೀಶ ಸಾಹುಕಾರ
ಕಾರ್ಯಕರ್ತರಿಗೆ ಪಕ್ಷದ ತತ್ವ, ಸಿದ್ದಾಂತಗಳ ಕುರಿತು ತರಬೇತಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕೇಡರ್ ಪಕ್ಷವನ್ನಾಗಿಸಲು ಪಣತೊಟ್ಟಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟನೆಗೊಳಿಸಲು ಟೊಂಕಕಟ್ಟಿ ನಿಂತಿದ್ದಾರೆ. ಅಲ್ಲದೇ, ಈ ಕೇಂದ್ರದ ಹೊಣೆಯನ್ನೂ ಹೊತ್ತಿದ್ದಾರೆ. ತರಬೇತಿ ಕೇಂದ್ರದ ಕಟ್ಟಡವನ್ನು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಿಸುವ ಮೂಲಕ ಪಕ್ಷಕ್ಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ಈ ತರಬೇತಿ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಅತಿಥಿ ಉಪನ್ಯಾಸಕರು ಇದ್ದಾರೆ. ಪಕ್ಷದ ಹಿರಿಯ ನಾಯಕರಿಂದ ಹಿಡಿದು ಕಾರ್ಯಕರ್ತರು ಈ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳ ಕುರಿತು ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರಿತ ಪಕ್ಷವನ್ನಾಗಿ ರೂಪಿಸಲಾಗುತ್ತದೆ ಎನ್ನುತ್ತಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು.
ಆಡಳಿತಗಾರರು, ಸಾಮಾಜಿಕ ಕಾರ್ಯಕರ್ತರು, ಎನ್‌ಜಿಒ ಸದಸ್ಯರು,ವಿದ್ಯಾರ್ಥಿ ಮುಖಂಡರು. ಮಹಿಳೆಯರ ಹಕ್ಕುಗಳ ವಿರುದ್ಧ ಹೋರಾಡುವ ಸಂಸ್ಥೆಗಳ ಪದಾಧಿಕಾರಿಗಳು, ಮಕ್ಕಳು, ಪರಿಸರವಾದಿಗಳು, ಮೂಢನಂಬಿಕೆ ವಿರೋಧಿ ಹೋರಾಟಗಾರರು, ಕಾನೂನು ಜಾಗೃತಿ ಸಂಘಟನೆಗಳು, ರೈತ ಮುಖಂಡರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನ ನೀಡಲಾಗುವುದು. ಕಾಂಗ್ರೆಸ್ ಪಕ್ಷ ಕೇಡರ್ ಆಧಾರಿತ ಪಕ್ಷವಾಗಬೇಕು. ಇದಕ್ಕೆ ಕಾರ್ಯಕರ್ತರಿಗೆ ತರಬೇತಿ ನೀಡುವುದೇ ಮೊದಲ ಹೆಜ್ಜೆಗಳಾಗಿವೆ.

ಕೇಡರ್ ಸದಸ್ಯರನ್ನು ಮುಖ್ಯವಾಹಿನಿಯ ಸಾಮಾಜಿಕ ಸೇವೆ, ಪಕ್ಷದ ಸಂಘಟನೆ, ಆಡಳಿತ ಮತ್ತು ಸಾರ್ವಜನಿಕ ನೀತಿ ಮತ್ತು ಡಿಜಿಟಲ್ ಅಭಿಯಾನ ಸೇರಿದಂತೆ ವಿವಿಧ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವರಿಗೆ ತರಬೇತಿ ನೀಡಿದ ಬಳಿಕ ಅವರನ್ನು ಅವರ ಆಸಕ್ತಿ ಹೊಂದಿರುವ ವಿಭಾಗಗಳಲ್ಲಿ ತೊಡಗಿಕೊಳ್ಳಲಾಗುವುದು. ಅಕಾಡೆಮಿ ತರಬೇತಿ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ತರಬೇತಿ ನೀಡಲುನಾವು ಇದನ್ನು ಬಳಸುತ್ತೇವೆ. ಡಿಜಿಟಲ್ ಪ್ರಚಾರ ಕ್ಷೇತ್ರದಲ್ಲಿ ನಾವು ಹೆಚ್ಚಾಗಿ ತೊಡಗಿಕೊಳ್ಳಬೇಕಿದೆ. ಬಿಜೆಪಿ ಪಕ್ಷ ತನ್ನ ಐಟಿ ಕೋಶವನ್ನು ಅಭಿಯಾನಕ್ಕೆ ಮಾತ್ರವಲ್ಲದೇ, ಪಕ್ಷದ ನಾಯಕರು,ಸಚಿವರ ಮೂಲಕ ಸರ್ಕಾರದ ಯೋಜನೆಗಳ ಕುರಿತು ಪ್ರತಿಕ್ರಿಯೆ ನೀಡುತ್ತಿದೆ.ತಪ್ಪು ಮಾಹಿತಿ ನೀಡುವುದು, ಪ್ರತಿಪಕ್ಷ ನಾಯಕರನ್ನು ನಿಂದಿಸಲು ಮತ್ತು ಸುಳ್ಳು ಮಾಹಿತಿಗಳನ್ನು ಹರಿಬಿಡಲು ಐಟಿ ಕೋಶವನ್ನು ಬಳಸಲಾಗುತ್ತದೆ. ಹಾಗಾಗಿ, ಬಿಜೆಪಿ ಪಕ್ಷವನ್ನು ನಾವು ಕೂಡ ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಮಗೂ ಐಟಿ ಕೋಶದ ತಂಡವನ್ನು ಕಟ್ಟಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *