ಬೆಳಗಾವಿ- ಎಂಈಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರನ್ನು ಬಿಜೆಪಿಗೆ ಕರ್ಕೊಂಡ ಬರ್ತೀವಿ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಘಟಪ್ರಭಾದಲ್ಲಿರುವ ಸೇವಾದಳದ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು,ನಾಡಿನ ನೆಲ,ಜಲ,ಭಾಷೆಗೆ ವಿರೋಧ ಮಾಡಿದ್ದನ್ನು ಮಂತ್ರಿಗಳು ನೋಡಬೇಕಾಗಿತ್ತು,ರಾಷ್ಟ್ರೀಯ ಪಕ್ಷವೊಂದು ನಾಡಿನ ವಿರುದ್ಧ ಕೆಲಸ ಮಾಡಿದವರಿಗೆ,ಪಕ್ಷಕ್ಕೆ ಅಹ್ವಾನ ನೀಡುತ್ತಿದೆ.ಅದು ಅವರ ಪಕ್ಷದ ಸಿದ್ಧಾಂತ ಈಬಗ್ಗೆ ನಾವು ಏನೂ ಹೆಳಾಕ ಆಗೋಲ್ಲ ಎಂದು ಸತೀಶ್ ಜಾರಕಿಹೊಳಿ ಅವರು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ನಾಡಿನ ನೆಲ ಜಲ ಭಾಷೆಗೆ ವಿರೋಧ ಮಾಡುತ್ತ ಬಂದವರನ್ನು ಪಕ್ಷಕ್ಕೆ ಅಹ್ವಾನಿಸುವ ಮೊದಲು ರಾಷ್ಟ್ರೀಯ ಪಕ್ಷವಾಗಿ ಆ ಪಕ್ಷದ ಮಂತ್ರಿಗಳು ಹತ್ತು ಬಾರಿ ಯೋಚಿಸಬೇಕಿತ್ತು, ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ