Breaking News

ಬೆಳಗಾವಿ- ಧಾರವಾಡ ನಡುವೆ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದ ಬೇಡಿಕೆಗೆ ರಕ್ಕೆ….!!!

ಬೆಳಗಾವಿ- ಮುರುಗೇಶ್ ನಿರಾಣಿ ಅವರು ರಾಜ್ಯದ ಕೈಗಾರಿಕಾ ಸಚಿವರಾಗಿದ್ದಾಗ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಕಿತ್ತೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ ನಿರ್ಮಾಣ ಮಾಡುವ ವಿಚಾರವನ್ನು ಪ್ರಸ್ತಾಪ ಮಾಡಿದ ಸಂಧರ್ಭದಲ್ಲಿ ಇದು ಸಾಧ್ಯವೇ ಎನ್ನುವ ಚರ್ಚೆ ನಡೆದಿತ್ತು ಆದ್ರೆ ಈ ವಿಚಾರ ಈಗ ಮತ್ತೆ ಚರ್ಚೆಗೆ ಬಂದಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಬೇಡಿಕೆಯನ್ನು ಈಡೇರಿಸುವಂತೆ ಕೇಂದ್ರದ ವಿಮಾನಯಾನ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ರಾಜ್ಯದಲ್ಲಿ ಇನ್ನೊಂದು ಅಂತರಾಷ್ಟ್ರೀಯ ವಿಮಾನ ನಿಲ್ಧಾಣ ಬೇಕು ಎನ್ನುವ ಧ್ವನಿ ಕೇಳಿಬರುತ್ತಿದೆ. ಈ ವಿಚಾರವನ್ನು ರಾಜ್ಯದ ವಿವಿಧ ಪಕ್ಷಗಳ ನಾಯಕರು ಪ್ರಸ್ತಾಪಿಸಿ ಇನ್ನೊಂದು ನಿಲ್ಧಾಣ ಬೇಕು ಎಂದು ಒತ್ತಾಯವನ್ನು ಮಾಡಿದ್ದಾರೆ. ಹಾಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಉತ್ತರ ಕರ್ನಾಟಕದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ ಆಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದು ಲೋಕೋಪಯೋಗಿ ಸಚಿವ ಹುಬ್ಬಳ್ಳಿ – ಧಾರವಾಡ ಹಾಗೂ ಬೆಳಗಾವಿ ನಡುವೆ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ ಆಗಬೇಕು ಇದು ಈ ಭಾಗದ ಜನರ ಮಹತ್ವದ ಬೇಡಿಕೆಯಾಗಿದೆ ಎನ್ನುವ ವಿಚಾರ ವ್ಯಕ್ತಪಡಿಸಿದ್ದು ಈ ಮಹತ್ವದ ಬೇಡಿಕೆಗೆ ಈಗ ರಕ್ಕೆ ಪುಕ್ಕೆ ಬಂದಂತಾಗಿದೆ.

ಬೆಳಗಾವಿ ಮಹಾನಗರ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿದೆ. ಬೆಳಗಾವಿ ಮಹಾನಗರದಲ್ಲಿ ಸುವರ್ಣಸೌಧ ಇದೆ.ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿ ಇದೆ. ಬೆಳಗಾವಿ ಐತಿಹಾಸಿಕ ನಗರಿಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ. ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ಅಧಿವೇಶನ ನಡೆಸಿದ ಪುಣ್ಯ ನಗರಿಯಾಗಿದೆ. ರಾಮನಿಗಾಗಿ ಕಾಯ್ದ ಶಬರಿಯ ತವರೂರಾಗಿದೆ. ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಶೌರ್ಯ,ಸಹಾಸದ ಇತಿಹಾಸದ ಗತವೈಭವದ ಕ್ರಾಂತಿಯ ನೆಲ ಬೆಳಗಾವಿ ಜಿಲ್ಲೆಯಾಗಿದ್ದು ಈ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ ಆಗಬೇಕು ಎನ್ನುವ ಒತ್ತಾಯ ಕೇಳಿಬರುತ್ತಿರುವದು ಸಂತಸದ ಸಂಗತಿಯಾಗಿದೆ

ಉತ್ತರ ಕರ್ನಾಟಕದ ಪ್ರದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಭಾಗದ ಯುವಕರಿಗೆ ಉದ್ಯೋಗ ಸಿಗಬೇಕು ಅದಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ಬೃಹತ್ ಕೈಗಾರಿಗಳನ್ನು ಸ್ಥಾಪಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರಸಚಿವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದು ಈ ಭಾಗದ ಯುವಕರ ಭವಿಷ್ಯ ರೂಪಿಸುವ ಬೇಡಿಕೆಯನ್ನು ಸತೀಶ್ ಜಾರಕಿಹೊಳಿ ಅವರು ಮಂಡಿಸಿದ್ದು ಸ್ವಾಗತಾರ್ಹ ಸಂಗತಿಯಾಗಿದೆ.

Check Also

ಲೋಕಸಭೆಯಲ್ಲಿ ಬೆಳಗಾವಿ ಗಡಿ ಕುರಿತು ಶಿವಸೇನೆ ಕ್ಯಾತೆ

ಬೆಳಗಾವಿ- ಬೆಳಗಾವಿ ಗಡಿವಿವಾದದ ಕುರಿತು ನಿರಂತರವಾಗಿ ಕಾಲು ಕೆದರಿ ಜಗಳ ತೆಗೆಯುವ ಉದ್ಧವ ಠಾಕ್ರೆ ನೇತ್ರತ್ವದ ಶಿವಸೇನೆ,ಲೋಕಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರ …

Leave a Reply

Your email address will not be published. Required fields are marked *