ಬೆಳಗಾವಿ:
ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಶಿಯೇಶನ್ ಹಾಗೂ 9ನೇ ಸತೀಶ್ ಶುಗರ್ ಕ್ಲಾಸಿಕ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸರ್ಧಾರ ಮೈದಾನದಲ್ಲಿ ಡಿ.16, 17, 18 ರಂದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ದೇಹದಾಡ್ರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ.16 ರಂದು ಜಿಲ್ಲಾ ಮಟ್ಟಮ 17 ರಂದು ರಾಜ್ಯಮಟ್ಟ ಹಾಗೂ 18 ರಂದು ರಾಷ್ಟ್ರ ಮಟ್ಟದ ದೇಹದಾಡ್ರ್ಯ ಸ್ಪರ್ಧೇಯನ್ನು ಹಮ್ಮಿಕೊಳ್ಳಲಾಗಿದೆ. ಮಹಿಳಾ ಹಾಗೂ ಪುರುಷ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯನ್ನು ಸುಮಾರು 600 ಜನ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಜೇರಿಗೆ ನೀಡುವ ಬಹುಮಾನದ ವೆಚ್ಚ ಸುಮಾರು 40 ಲಕ್ಷ ರು ಆಗಲಿದೆ ಎಂದರು.
ಅಜೀತ್ ಸಿದ್ದನ್ನವರ 9844063043, ಸುನೀಲ ಅಪ್ಟೇಕರ 9964403602, ರಿಯಾಜ್ ಚೌಗಲಾ 9448110461 ಹಾಗೂ ಪ್ರಕಾಶ ಪೂಜೇರಿ 9880474767 ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …