ಬೆಳಗಾವಿ- ಬೆಳಗಾವಿ ಲೋಕಸಭಾ ಚುನಾವಣೆ ಘೋಷಣೆ ಆಗಿಲ್ಲ,ಆಕಾಂಕ್ಷಿಗಳು ಇನ್ನುವರೆಗೆ ಯಾರು ಮುಂದೆ ಬಂದಿಲ್ಲ,ಟಿಕೆಟ್ ಯಾರಿಗೆ ಅನ್ನೋ ಚರ್ಚೆ ನಡೆದಿಲ್ಲ,ಚುನಾವಣೆ ಘೋಷಣೆಯಾದ ಬಳಿಕ ಎಲ್ಲರೂ ಸೇರಿ ಸಭೆ ಮಾಡ್ತೀವಿ,ಗೆಲ್ಲುವ ಸಾಮರ್ಥ್ಯ ಯಾರಿಗಿದೆ,ಯಾರು ಪಾಪುಲರ್ ಆಗಿದ್ದಾರೆ ಅನ್ನೋದನ್ನು ಕನ್ಸೀಡರ್ ಮಾಡಿಯೇ ಟಿಕೆಟ್ ಕೊಡ್ತೀವಿ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು,ಬಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ಚರ್ಚೆ ನಡೆದಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಗೆಲ್ಲುವವರಿಗೆ ಮಾತ್ರ ಪಕ್ಷ ಮನ್ನಣೆ ನೀಡಲಿದೆ. ಇಲ್ಲಿ ಜಾತಿ, ಗುಂಪಿನ ಪ್ರಶ್ನೆ ಇಲ್ಲ ಎಂದು ಜಾರಕಿಹೊಳಿ ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ವಿಚಾರ.
ಉಪ ಚುನಾವಣೆ ಚುನಾವಣೆ ಘೋಷಣೆ ಆದಾಗ ಚರ್ಚೆಗೆ ಬರುತ್ತೆ.ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಇನ್ನೂ ಯಾರು ಆಕಾಂಕ್ಷಿಗಳು ಮುಂದೆ ಬಂದಿಲ್ಲ. ಪಕ್ಷದಲ್ಲಿ ಉಪಚುನಾವಣೆ ಚರ್ಚೆಯೆ ಆರಂಭವಾಗಿಲ್ಲ.ಮುಂದಿನ 15 ದಿನದಲ್ಲಿ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಶಿರಾ, ಆರ್ ಆರ್ ನಗರ ಉಪಚುನಾವಣೆ ವಿಚಾರ.
ಎರಡು ಕ್ಷೇತ್ರದಲ್ಲಿ ಗೆಲ್ಲಲ್ಲು ಪ್ರಯತ್ನ ಮಾಡಲಿದೆ.ಪಕ್ಷದ ಆಂತರಿಕ ಸಮಸ್ಯೆಯಿಂದ ಶಿರಾದಲ್ಲಿ ಸೋಲು ಅನುಭವಿಸುವಂತಾಯಿತು. ಈ ಸಲ ಎಲ್ಲಾರು ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ಬೆಳಗಾವಿ ಪ್ರವಾಹ ಸಮಸ್ಯೆ ಬಗ್ಗೆ ವಿಧಾನಸಭೆ ಚರ್ಚೆ ಆಗಿಲ್ಲ.ಸರಕಾತರ ಸರಿಯಾದ ಉತ್ತರ ಕೊಟ್ಟಿಲ್ಲ.
ಜನರ ಮುಂದೆ ಈ ವಿಷಯವನ್ನು ಹೇಳುತ್ತೇನೆ ಎಂದರು.
ನಾಳೆ ಕಾಂಗ್ರೆಸ್ ಭವನ ಉದ್ಘಾಟನೆ ಹಾಗೂ ಘಟಪ್ರಭಾದಲ್ಲಿನ ನಿರ್ಮಾಣ ಮಾಡಿರುವಲ್ಲಿ ಗಾಂಧಿ ಜಯಂತಿ ಆಚರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಳಗಾವಿಗೆ ಆಗಮಿಸಲಿದ್ದಾರೆ. ನಾಳೆ ಬೆಳಗಾವಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ಇದೆ.
ಘಟಪ್ರಭಾದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಘಟಪ್ರಭಾ ಸೇವ ದಳದ ಕಾರ್ಯಕ್ರಮ ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದೇವು. ಅವರ ಸಮಯ ನಿಗದಿಯಾಗಲಿಲ್ಲ. ಆದ್ದರಿಂದ ಅದನ್ನು ಮುಂದುಡಲಾಗಿದೆ ಎಂದರು.