ಬೆಳಗಾವಿ- ಮೈಸೂರಿನ ಚಾಮುಂಡಿ ಕ್ಷೇತ್ರದಿಂದ ಬಾದಾಮಿಯ ಬನಶಂಕರಿ ದೇವಿಯ ಸನ್ನಿದಾನದಲ್ಲಿ ಆಶ್ರಯ ಪಡೆದ ಮಾಜಿ ಸಿಎಂ ಸಿದ್ರಾಮಯ್ಯ ಈಗ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿಯ ಆಶಿರ್ವಾದ ಪಡೆಯುವ ಚಿಂತನೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಅವರು ಸ್ಪರ್ದೆ ಮಾಡುತ್ತಾರೆ ಎನ್ನುವ ಸುದ್ದಿ ಪ್ರಚಾರ ಪಡೆದ ಬೆನ್ನಲ್ಲಿಯೇ ಈಗ ಹೊಸ ಸುದ್ದಿ ಹರಿದಾಡುತ್ತಿದೆ. ಸಿದ್ರಾಮಯ್ಯ ನವರು ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ಈ ಬಾರಿ ಸ್ಪರ್ದೆ ಮಾಡ್ತಾರೆ ಎನ್ನುವ ಸುದ್ದಿ ದಟ್ಟವಾಗಿದ್ದು,ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೈರಾಣಾಗಿದ್ದಾರೆ.
ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ,ವಿಶ್ವಾಸ ವೈದ್ಯ,ಪಂಚನಗೌಡ,ಜೊತೆಗೆ ಚೋಪ್ರಾ ಅವರು ಲಾಬಿ ನಡೆಸಿದ್ದರು ಆದ್ರೆ ಈಗ ಏಕಾಏಕಿ ಸಿದ್ರಾಮಯ್ಯ ಸ್ಪರ್ದೆ ಮಾಡ್ತಾರೆ ಎನ್ನುವ ಸುದ್ದಿ ಜೋರಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ