Breaking News

ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ಅಭಿವೃದ್ಧಿಯ ಭಾಗ್ಯ…..!!!

ಬೆಳಗಾವಿ – ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸವದತ್ತಿ ಯಲ್ಲಮ್ಮನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಚಿಂತನೆ ನಡೆಸಿದ್ದು ಅಗಸ್ಟ್ 31 ರಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ತಂಡ ಯಲ್ಲಮ್ಮನ ಗುಡ್ಡಕ್ಕೆ ಭೇಟಿ ನೀಡಲಿದೆ.

ಪ್ರವಾಸೋದ್ಯಮ ಇಲಾಖೆಯ ಸಚಿವ ಹೆಚ್ ಕೆ ಪಾಟೀಲ ಅವರು ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರ ವಿಶೇಷ ಮನವಿ ಮತ್ತು ಒತ್ತಾಯದ ಮೇರೆಗೆ ಸಚಿವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಅಗಸ್ಟ್ 31 ರಂದು ಅಧಿಕಾರಿಗಳ ತಂಡವನ್ನು ಕಳುಹಿಸಿ ಯಲ್ಲಮ್ಮನ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಪಡಿಸಲು ಸಾಧ್ಯ ಎನ್ನುವದರ ಬಗ್ಗೆ ಪರಶೀಲನೆ ಮಾಡಿ ಪ್ರವಾಸೋದ್ಯಮ ಇಲಾಖೆಗೆ ವರದಿ ನೀಡಲಿದ್ದಾರೆ.

ಯಲ್ಲಮ್ಮನ ದೇವಸ್ಥಾನಕ್ಕೆ ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಪ್ರವಾಸಿಗರು ಭಕ್ತರು ಬರುತ್ತಾರೆ. ಅವರಿಗೆ ವಸತಿ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ.ಭಕ್ತರ ವಸತಿಗಾಗಿ ಎರಡು ಸಾವಿರ ಅತಿಥಿ ಗೃಹಗಳ ಅಪಾರ್ಟ್‌ಮೆಂಟ್, ವಿಶಾಲವಾದ ಚಕ್ಕಡಿ ಬಂಡಿಗಳ ನಿಲ್ಧಾಣ,ಸುಸಜ್ಜಿತ ಶೌಚಾಲಯಗಳ ನಿರ್ಮಾಣ,ಚಕ್ಕಡಿಗಳನ್ನು ಎಳೆದು ತರುವ ಎತ್ತುಗಳ ವಿಶ್ರಾಂತಿಗೆ ಬೃಹತ್ ಗೋ ಶಾಲೆಯ ನಿರ್ಮಾಣ,ಸೇರಿದಂತೆ ಭಕ್ತರ ಅನಕೂಲಕ್ಕೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿ ಯಲ್ಲಮ್ಮನ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡುವದರ ಜೊತೆಗೆ ದೇವಿಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ವಿಶೇಷವಾದ ಯೋಜನೆ ರೂಪಿಸಲು ಸರ್ಕಾರ ವಿಶೇಷವಾದ ಆಸಕ್ತಿ ಹೊಂದಿದೆ.

ಅದಕ್ಕಾಗಿಯೇ ಅಗಸ್ಟ್ 31 ರಂದು ಅಧಿಕಾರಿಗಳ ತಂಡ ಯಲ್ಲಮ್ಮ ದೇವಿಯ ದರ್ಶನ ಪಡೆಯಲಿದೆ. ಈ ಪುಣ್ಯ ಕ್ಷೇತ್ರ ಮಹಾರಾಷ್ಟ್ರದ ಪಂಢರಪುರ,ಶಿರಡಿಯ ಸಾಯಿಬಾಬಾ ದೇವಸ್ಥಾನಗಳ ಮಾದರಿಯಲ್ಲೇ ಅಭಿವೃದ್ಧಿ ಆಗಬೇಕೆನ್ನುವದು ಸವದತ್ತಿ ಯಲ್ಲಮ್ಮ ದೇವಿಯ ಕೋಟ್ಯಾಂತರ ಭಕ್ತರ ಅಪೇಕ್ಷೆಯಾಗಿತ್ತು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *