ನಂಜನಗೂಡು-
ಸರ್ಕಾರಿ ಶಾಲೆಯ ಮಾಸ್ತರನೊಬ್ಬ ಮಾಡಬಾರದ ಹಲ್ಕಟ್ ಕೆಲಸ ಮಾಡಿದ್ದಾನೆ ತನ್ನ ಹಳೇ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ನಡೆಸಿದ್ದು, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಶಿಕ್ಷಕ ಈಗ ಊರು ಬಿಟ್ಟು ಪರಾರಿಯಾಗಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕನ ರಾಸಲೀಲೆಯ ಪೋಟೋಗಳು ವೈರಲ್ ಆಗಿ
ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಈ ಶಿಕ್ಷಕ ಜಾಗ ಖಾಲಿ ಮಾಡಿದ್ದಾನೆ.
58 ವರ್ಷದ ಶಿಕ್ಷಕ ಸಿದ್ದರಾಜು ಎಂಬಾತ ತನ್ನ ಮಗಳ ವಯಸ್ಸಿನ 20 ವರ್ಷದ ವಿದ್ಯಾರ್ಥಿನಿ ಜತೆ ಸಂಬಂಧ ಬೆಳೆಸಿದ್ದು, ಸದ್ಯ ಇಬರಿಬ್ಬರ ನಗ್ನ ಪೋಟೋಗಳು ವೈರಲ್ ಆಗಿವೆ. ಈ ಕುರಿತು ಯಾವುದೇ ಠಾಣೆಯಲ್ಲಿ ದೂರು ದಾಖಲು ಆಗದಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕನ ಗ್ರಾಮಕ್ಕೆ ಹೋಗಿ ವಿಚಾರಣೆ ನಡೆಸಿದ್ದಾರೆ.
ಶಿಕ್ಷಕ ಸಿದ್ದರಾಜು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದಾನೆ. ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಇದೇ ಶಾಲೆಯ ಹಳೇ ವಿದ್ಯಾರ್ಥಿನಿಯೊಂದಿಗೆ ಸಂಬಂಧ ಬೆಳೆಸಿದ್ದ ಎನ್ನಲಾಗುತ್ತಿದೆ.
ಈತ ರಾಜಕಾರಣಿಗಳ ಜತೆಗೂ ಸಂಪರ್ಕ ಹೊಂದಿದ್ದು, ಈ ಹಿಂದೆ ಮಾಜಿ ಸಚಿವರೊಬ್ಬರ ಪಿ ಎ ಆಗಿ ಕೆಲಸ ಮಾಡಿದ್ದ ಎಂಬ ಸುದ್ಧಿ ಮೈಸೂರು ಜಿಲ್ಲೆಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿದೆ.
ಮಾಡಬಾರದ್ದನ್ನೆಲ್ಲಾ ಹಲ್ಕಟ್ ಕೆಲಸ ಮಾಡಿರುವ ಈ ಶಿಕ್ಷಕ ಗುರುಕುಲಕ್ಕೆ ಕಳಂಕ ತಂದಿದ್ದಾನೆ .