Breaking News
Home / Breaking News / ಸಮಸ್ಯೆಗಳ ಪರಿಹಾರಕ್ಕಾಗಿ ಸಂವಾದ…..ವ್ಯಾಪಾರಿಗಳಿಗೆ ಶಾಸಕರ ಆಶಿರ್ವಾದ….!!!!

ಸಮಸ್ಯೆಗಳ ಪರಿಹಾರಕ್ಕಾಗಿ ಸಂವಾದ…..ವ್ಯಾಪಾರಿಗಳಿಗೆ ಶಾಸಕರ ಆಶಿರ್ವಾದ….!!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕ ಅಭಯ ಆಟೀಲ ಮುಂದಾಗಿದ್ದು ಇಂದು ಸಂಜೆ ಬೆಳಗಾವಿಯಲ್ಲಿ ವ್ಯಾಪಾರಿಗಳ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಂಜೆ 4- 30 ಘಂಟೆಗೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಅಂಭಾಬಾಯಿ ದೇವಸ್ಥಾನದಲ್ಲಿ ಶಾಸಕ ಅಭಯ ಪಾಟೀಲ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ,ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂವಾದದ ಮೂಲಕ ಆಲಿಸಿ,ದಕ್ಷಿಣ ಮತಕ್ಷೇತ್ರದ ವ್ಯಾಪಾರ ವೃದ್ಧಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲು ಶಾಸಕ ಅಭಯ ಪಾಟೀಲ ಮುಂದಾಗಿದ್ದಾರೆ .

ಅಟೋ ಚಾಲಕರ ಸಮಸ್ಯೆ,ಪೌರ ಕಾರ್ಮಿಕರ ಸಮಸ್ಯೆ,ನೇಕಾರ ಬಂಧುಗಳ ಸಮಸ್ಯೆ.ನೆರೆ ಸಂತ್ರಸ್ಥರ ಸಮಸ್ಯೆ ಹೀಗೆ ಎಲ್ಲ ವರ್ಗಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿರುವ ಶಾಸಕ ಅಭಯ ಪಾಟೀಲ ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಲು ಸಂವಾದ ಕಾರ್ಯಕ್ರಮ ಆಯೋಜಿಸಿರುವದು ಪ್ರಶಂಸನೀಯ ಮತ್ತು ಸ್ವಾಗತಾರ್ಹ ಸಂಗತಿಯಾಗಿದೆ‌.

ಇಂದು ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪಾರಿ ಬಂಧುಗಳು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ.

Check Also

ಮಟಕಾ ವಿರುದ್ಧ,ಬೆಳಗಾವಿ ಪೋಲೀಸರಿಂದ ಮಹಾ ಯುದ್ಧ…!

ಸಮರ್ಥ ನಗರದಲ್ಲಿ ಮಟಕಾ ದಾಳಿ… ಬೆಳಗಾವಿ- ರಾತ್ರಿ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥನಗರದಲ್ಲಿ *ಮಟ್ಕಾ ದಾಳಿ* ಕೈಕಾಂಡಿದ್ದು, ಈ …

Leave a Reply

Your email address will not be published. Required fields are marked *