Breaking News

ನನ್ನ ಸಮಾಜದ ಜಾಗೃತಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ- ಶಂಕರ ಮುನವಳ್ಳಿ

ಬೆಳಗಾವಿ- ಬಾಬಾಸಾಹೇಬ ಅಂಬೇಡ್ಕರ್ ಅವರು ನಮ್ಮ ಪಾಲಿನ ದೇವರು ಅವರನ್ನು ಕಳೆದುಕೊಂಡ ದಿನ ಸ್ಮಶಾನದಲ್ಲಿ ಅವರ ಭಾವಚಿತ್ರ ಇಟ್ಟು ಸತ್ತವರ ಎದುರು ದಯಮಾಡಿ ಸಿಹಿ ಹಂಚಿ ಬಾಬಾ ಸಾಹೇಬರನ್ನು ಅವಮಾನಿಸಬೇಡಿ ಎಂದು ದಲಿತ ಸಮಾಜದ ಮುಖಂಡ ಶಂಕರ ಮುನವಳ್ಳಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಮತ್ರು ಮಠಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾರೆ

ಸತೀಶ ಜಾರಕಿಹೊಳಿ ಅವರು ಮೂಡ ನಂಬಿಕೆ ವಿರುದ್ಧ ಮಾಡುತ್ತಿರುವ ಕಾರ್ಯಕ್ರಮಕ್ಕೆ ನಮ್ಮ ವಿರೋಧ ಇಲ್ಲ ಆದರೆ ಸ್ಮಶಾನದಲ್ಲಿ ಸತ್ತವರನ್ನು ಅಂತ್ಯಕ್ರಿಯೆ ಮಾಡುವ ಸಂಧರ್ಭದಲ್ಲಿ ಅವರು ದುಖದಲ್ಲಿರುವಾಗ ಸ್ಮಶಾನದಲ್ಲಿ ಸಿಹಿ ಊಟದ ವ್ಯೆವಸ್ಥೆ ಮಾಡುವ ಬಗ್ಗೆ ನಮ್ಮ ವಿರೋಧವಿದೆ ಸಾಮಾನ್ಯವಾಗಿ ಶತ್ರುಗಳನ್ನು ಸಂಹಾರ ಮಾಡಿದಾಗ ಸಿಹಿ ಹಂಚುತ್ತಾರೆ ಬಾಬಾ ಸಾಹೇಬರು ನಿಮ್ಮ ಶತ್ರುವೇ ಎಂದು ಶಂಕರ ಮುನವಳ್ಳಿ ಸತೀಶ ಜಾರಕಿಹೊಳಿ ಅವರನ್ನು ಪ್ರಶ್ನಿಸಿದ್ದಾರೆ

ಬಹು ಸಂಖ್ಯಾತರನ್ನು ಸೇರಿಸಿ ದಲಿತರನ್ನು ಹತ್ತಿಕ್ಕುವ ಕಾರ್ಯಕ್ರಮಗಳು ನಡೆಯುತ್ತಿವೆ ಅನ್ಯ ಜಾತಿಯ ಜನರಿಂದ ದೌರ್ಜನ್ಯ ನಡೆಯುತ್ತಿದೆ ತಮ್ಮಲ್ಲಿ ತೋಳ್ಬಲ ಇದೆ ಅಧಿಕಾರದ ಮದ ಏರಿದೆ ಎಂದು ಬಾಬಾಸಾಹೇಬರನ್ನು ಅವಮಾನ ಮಾಡಿದರೆ ಅದನ್ನು ನಾವು ಸಹಿಸಲು ಸಾಧ್ಯವಿಲ್ಲ ಲಿಂಗಾಯತ ಧರ್ಮ ಸರ್ವ ಧರ್ಮಗಳನ್ನು ಸಂರಕ್ಷಿಸುವ ಧರ್ಮವಾಗಿದೆ ಬಸವಣ್ಣನವರ ತತ್ವಗಳನ್ನು ತಿಳಿದುಕೊಂಡಿರುವ ಮಠಾಧೀಶರು ಶವಗಳ ಎದುರು ಜನ ದುಖದಲ್ಲಿರುವಾಗ ಅವರ ಮುಂದ ಸಿಹಿ ಹಂಚುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಶಂಕರ ಮುನವಳ್ಳಿ ಮಠಾಧೀಶರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ

ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ನಾನೆಂದಿಗೂ ಹತ್ಯೆಗೆ ಬೆದರಿಲ್ಲ ಈ ಕುರಿತು ಮಾರ್ಕೇಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ನನ್ನ ಸಮಾಜದ ಜಾಗೃತಿಗಾಗಿ ನನ್ನ ಪ್ರಾಣ ಕೊಡಲೂ ಸಿದ್ಧನಾಗಿದ್ದೇನೆ ಸಮಾಜಕ್ಕೆ ಹಾಗು ನಮ್ಮ ಪಾಲಿನ ದೇವರಾದ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನವಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುನವಳ್ಳಿ ಹೇಳಿದ್ದಾರೆ

ಡಿಸೆಂಬರ ಆರು ನಮ್ಮ ದೇವರನ್ನು ಕಳೆದುಕೊಂಡ ದಿನ ಈ ದಿನ ಸಮಾಜದ ಜನ ಊಟವನ್ನೂ ತ್ಯೇಜಿಸಿ ದುಖದಲ್ಲಿರುವಾಗ ಅವರನ್ನು ಕಳೆದುಕೊಂಡ ದಿನ ಸಿಹಿ ಹಂಚಿದರೆ ಅದನ್ನು ಸಮಾಜದ ಜನ ಸಹಿಸಲಾರರು ನಮ್ಮ ದೇವರು ನಮ್ಮನ್ನಗಲಿದ ದಿನ ಸಿಹಿ ಹಂಚುವ ಕೃತ್ಯ ಹೀನ ಕೃತ್ಯವಾಗಿದೆ ಎಂದು ಶಂಕರ ಮುನವಳ್ಳಿ ಅಭಿಪ್ರಾಯ ಪಟ್ಟಿದ್ದಾರೆ

ದಲಿತ ಸಮಾಜದ ಮುಖಂಡು ಸೇರಿಕೊಂಡು ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನವನದಲ್ಲಿ ಪರಿನಿರ್ವಾಣ ದಿನವನ್ನು ಸರ್ಕಾರದ ಹಾಗು ಪಾಲಿಕೆಯ ಯಾವುದೇ ರೀತಿಯ ಸಹಾಯ ಸಹಕಾರ ಇಲ್ಲದ ಅರ್ಥ ಪೂರ್ಣ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಸಮಾಜದ ಜಾಗೃತಿ ಮೂಡಿಸುವ ಗೋಷ್ಠಿಗಳು ಸಂವಾದ ಕಾರ್ಯಕ್ರಮಗಳು ಇಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ಡಾ ಬಾಬಾಸಾಹೇಬರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೆಕೇಂದು ಶಂಕರ ಮುನವಳ್ಳಿ ಮನವಿ ಮಾಡಿಕೊಂಡಿದ್ದಾರೆ

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.