ಹುಬ್ಬಳ್ಳಿ: -ರಾಜ್ಯಾದ್ಯಂತ ಆರಂಭವಾಗಿರುವ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರ ಉಚಿತ ಪ್ರಯಾಣದ “ಶಕ್ತಿ ಯೋಜನೆ”ಯ ಮೊದಲ ದಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಬಸ್ಸುಗಳಲ್ಲಿ 1.22 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ರವಿವಾರ ಜೂನ್ 11ರಂದು ಆರಂಭಿಸಲಾಗಿರುವ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುತ್ತದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಸಂಸ್ಥೆಯ ವ್ಯಾಪ್ತಿಯ ಧಾರವಾಡ ಬೆಳಗಾವಿ ಬಾಗಲಕೋಟೆ ಗದಗ ಹಾವೇರಿ ಮತ್ತು ಉತ್ತರಕನ್ನಡ ಆರು ಜಿಲ್ಲೆಗಳಲ್ಲಿ ಜೂನ್ 11ರಂದು ಮಧ್ಯಾಹ್ನ 1:00 ಯಿಂದ ರಾತ್ರಿ 12 ಗಂಟೆವರೆಗೆ ಒಟ್ಟು 1,22,354 ಮಹಿಳೆಯರು ಪ್ರಯಾಣಮಾಡಿದ್ದಾರೆ. ಪ್ರಯಾಣ ಮಾಡಿದ ಬಸ್ ಟಿಕೆಟ್ ದರದ ಮೊತ್ತ ರೂ. 36,17,096 ಗಳಾಗಿದೆ.
*ಜಿಲ್ಲಾವಾರು ಮಾಹಿತಿ*
ಜಿಲ್ಲೆ / ಮಹಿಳಾ ಪ್ರಯಾಣಿಕರು
ಧಾರವಾಡ ನಗರ ಸಾರಿಗೆ 12354
ಧಾರವಾಡ ಗ್ರಮಾಂತರ 11,780
ಬೆಳಗಾವಿ 34,797
ಬಾಗಲಕೋಟೆ 11,687
ಗದಗ 13,630
ಹಾವೇರಿ 16,656
ಉತ್ತರ ಕನ್ನಡ 8,497
ಸೋಮವಾರದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ. ಬಸ್‌ಗಳ ಸುಗಮ ಕಾರ್ಯಾಚರಣೆ ಮೇಲ್ವಿಚಾರಣೆಗಾಗಿ ಪ್ರಮುಖ ಬಸ್ ನಿಲ್ದಾಣಗಳಿಗೆ ಅದಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಉಚಿತ ಪ್ರಯಾಣ ಇನ್ನೂ ಸುಲಭ*
ಮಹಿಳೆಯರ ಉಚಿತ ಪ್ರಯಾಣವನ್ನು ಮತ್ತಷ್ಟು ಸುಲಭವಾಗಿಸುವ ದೃಷ್ಟಿಯಿಂದ
ರಾಜ್ಯದ ವಿಳಾಸವಿರುವ ಭಾವಚಿತ್ರ ಸಹಿತ ಅದಿಕೃತ ದಾಖಲೆಗಳ ಮೂಲ ಪ್ರತಿ,ನಕಲು,ಡಿಜಿಲಾಕರ್ ( ಹಾರ್ಡ್ ಮತ್ತು ಸಾಫ್ಟ್ ಪ್ರತಿ) ಮಾದರಿಯ ಗುರುತಿನ ದಾಖಲೆಗಳನ್ನು ಸಹ ಮಾನ್ಯ ಮಾಡಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ಪ್ರಯಾಣ ಉಚಿತ ಆದರೆ ಟಿಕೆಟ್ ಪಡೆಯುವುದು ಕಡ್ಡಾಯ ಎಂದು ಅವರು ಮಾಹಿತಿ ನೀಡಿದ್ದಾರೆ.