ಬೆಳಗಾವಿ- ಬೆಳಗಾವಿಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ವೇದಿಕೆಯ ಮುಖಂಡರು ಬೆಳಗಾವಿ ವಿಭಾಗದ ಕಾಂಗ್ರೆಸ್ ಉಸ್ತುವಾರಿ ಮಾನಿಕ್ ಠ್ಯಾಗೋರ ಅವರನ್ನು ನಗರದ ಸಂಕಮ ಹೊಟೇಲ್ ನಲ್ಲಿ ಭೇಟಿಯಾಗಿ ತರಾಟೆಗೆ ತೆಗೆದುಕೊಂಡರು
ನೀವು ಬೆಳಗಾವಿಗೆ ಬರುತ್ತಿರುವ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿಲ್ಲ ನೀವು ಬೆಳಗಾವಿಗೆ ಬಂದು ಅಭಿಪ್ರಾಯ ಸಂಗ್ರಹಿಸುತ್ತಿರುವ ವಿಷಯ ಸಾಮಾನ್ಯ ಕಾರ್ಯಕರ್ತರಿಗೆ ಗೊತ್ತಿಲ್ಲ ಕೆಲವು ನಾಯಕರು ನಿಮ್ಮ ವ್ಯವಸ್ಥೆ ಮಾಡುತ್ತಿದ್ದಾರೆ ಅಂತ ಅವರ ಅಭಿಪ್ರಾಯ ಕೇಳಬೇಡಿ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯ ವನ್ನೂ ಕೇಳಿ ಎಂದು ಶಂಕರ ಮುನವಳ್ಳಿ ಮಾನಿಕ್ ಟ್ಯಾಗೋರ್ ಅವರನ್ನು ತರಾಟೆಗೆ ತೆಗೆದುಕೊಂಡರು
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಲು ಶ್ರಮಿಸುತ್ತಿದ್ದೇವೆ ನೀವು ನಾಲ್ಕು ಗೋಡೆಗಳ ಮದ್ಯಕುಳಿತುಕೊಂಡು ಕೆಲವೇ ಕೆಲವು ಮುಖಂಡರ ಅಭಿಪ್ರಾಯ ಕೇಳುವದು ಸರಿಯಲ್ಲ ಸಾಮಾನ್ಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಶಂಕರ ಮುನವಳ್ಳಿ ಅವರು aicc ಕಾರ್ಯದರ್ಶಿ ಹಾಗು ಬೆಳಗಾವಿ ವಿಭಾಗದ ಕಾಂಗ್ರೆಸ್ ಉಸ್ತುವಾರಿ ಮಾನಿಕ್ ಟ್ಯಾಗೋರ್ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು
ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯ ಕೇಳದೇ ಪ್ರಭಾವಿಗಳ ಮಾತಿಗೆ ಮನಿದು ಪ್ರಭಾವಿಗಳಿಗೆ ಮಾತ್ರ ಟಿಕೆಟ್ ಕೊಟ್ಟರೇ ನಾವು ಸುಮ್ಮನೇ ಕುಳಿತುಕೊಳ್ಳುವದಿಲ್ಲ ಸೋನಿಯಾ ಗಾಂಧಿ ಅವರಿಗೆ ದೂರು ಕೊಡುತ್ತೇವೆ ಅಲ್ಲಿಯೂ ನ್ಯಾಯ ಸಿಗದಿದ್ದರೆ ಬೆಳಗಾವಿ ಜಿಲ್ಕೆಯ ಹದಿನೆಂಟೂ ವಿಧಾನಸಭಾ ಕ್ಷೇತ್ರ ಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ವೇದಿಕೆಯಿಂದ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಶಂಕರ ಮುನವಳ್ಳಿ ಮಾನಿಕ್ ಟ್ಯಾಗೋರ್ ಅವರಿಗೆ ಎಚ್ಚರಿಕೆ ನೀಡಿದರು
ಅಭಿಒ್ರಾಯ ಸಂಗ್ರಹಿಸುವ ವಿಷಯದಲ್ಲಿ ತಾರತಮ್ಯ ಮಾಡಿಲ್ಲ ನಾವು ನಿಮ್ಮ ಅಭಿಪ್ರಾಯವನ್ನು ಕೇಳುತ್ತೇವೆ ಎಂದು ಮಾನಿಕ್ ಟ್ಯಾಗೋರ್ ಅವರು ಶಂಕರ ಮುನವಳ್ಳಿ ಅವರನ್ನು ಸಮಾಧಾನಪಡಿಸಿದರು
ಬಾಬುಲಾಲ್ ಬಾಗವಾನ್ ನಜೀರ ದರ್ಗಾ ಸೇರಿದಂತೆ ನಿಷ್ಠಾವಂತ ಕಾಂಗ್ರೆಸ ಮುಖಂಡರು ಉಪಸ್ಥಿತರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ