ಬೆಳಗಾವಿ- ರಾಜ್ಯದ ಕಾಂಗ್ರೆಸ್ ನಾಯಕರು ಎಸ್ ಎಂ ಕೃಷ್ಣಾ ಅವರನ್ನು ಮರಳಿ ಕಾಂಗ್ರೆಸ್ ತರುವ ಪ್ರಯತ್ನ ಮಾಡದೇ ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತರುವದಕ್ಕೆ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ
ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು ದಿನೇಶ ಗುಂಡುರಾವ ಮತ್ತು ರಮೇಶ ಕುಮಾರ್ ಅವರು ಎಸ್ ಎಂ ಕೃಷ್ಣಾ ಅವರಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡುವದನ್ನು ನಿಲ್ಲಿಸಲಿ ಎಸ್ ಎಂ ಕೃಷ್ಣಾ ಇಲ್ಲದೇ ಕಾಂಗ್ರೆಸ್ ಪಕ್ಷ ಇಲ್ಲ ಅವರು ಪಕ್ಷದ ನಿಷ್ಠಾವಂತರಾಗಿದ್ದು ಅವರನ್ನು ಪಕ್ಷದಿಂದ ಯಾವುದೇ ಕಾರಣಕ್ಕೂ ಬಿಟ್ಡು ಕೊಡುವದಿಲ್ಲ ಎಂದು ಮುನವಳ್ಳಿ ತಿಳಿಸಿದ್ದಾರೆ
ರಮೇಶ ಕುಮಾರ ಅವರು ಎಸ್ ಎಂ ಕೃಷ್ಣಾ ವಿಷಯ ಮುಗಿದ ಅಧ್ಯಾಯ ಎಂದು ಹೇಳಲು ರಮೇಶ ಕುಮಾರ್ ಯಾರು? ಅವರೇನು ಪಕ್ಷದ ಅಧ್ಯಕ್ಷರೂ ಅಲ್ಲ .ಮೂಲ ಕಾಂಗ್ರೆಸ್ಸಿಗರೂ ಅಲ್ಲ ಎಸ್ ಎಂ ಕುರಿತು ಮಾತನಾಡಲು ರಮೇಶಕುಮಾರ ಅವರಿಗೆ ನೈತಿಕ ಹಕ್ಕಿಲ್ಲ ಎಂದು ಮುನವಳ್ಳಿ ಆರೋಪಿಸಿದ್ದಾರೆ
ಎಸ್ ಎಂ ಕೃಷ್ಣಾ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಬಾರದೆಂದು ಆಗ್ರಹಿಸಿ ಫೆ 6 ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ ಈ ಸಭೆಯಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬಹುದು ಎಂದು ಶಂಕರ ಮುನವಳ್ಳಿ ಮನವಿ ಮಾಡಿಕೊಂಡಿದ್ದಾರೆ
ಫೆ 6 ರಂದು ಬೆಳಗಾವಿಯಲ್ಲಿ ಸಭೆ ನಡೆಸಿ ಫೆ 8 ,ರಂದು ಬೆಂಗಳೂರಿನಲ್ಲಿ ಎಸ್ ಎಂ ಕೃಷ್ಣ ಅವರ ನಿವಾಸದ ಎದುರು 300 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿ ಅವರನ್ನು ಮನವೊಲಿಸುವ ಕಾರ್ಯವನ್ನು ಮಾಡಲಿದ್ದಾರೆ ಎಂದು ಶಂಕರ ಮುನವಳ್ಳಿ ತಿಳಿಸಿದರು