ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ,ಹಾಗು ಶಾಸಕ ಫಿರೋಜ್ ಸೇಠ ಅವರು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕುಲಕರ್ಣಿ ಕುಟುಂಬಕ್ಕೆ ಮತ್ತು ತಮಗೆ ಸೇರಿದ ಚರ್ಚ ಬಳಿಯ ಜಾಗೆಯನ್ನು ಕಬಳಿಸುವ ಹುಣ್ಣಾರ ನಡೆದಿದ್ದು ಈ ಹಗರಣ ಡೈರಿ ಹಗರಣ ಕ್ಕಿಂತಲೂ ಭಯಾನಕ ವಾಗಿದೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದ್ದಾರೆ
ತಮಗೆ ಸೇರಿದ ಜಾಗೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಭೂ ಕಬಳಿಕೆ ಮಾಡುತ್ತಿರುವ ವಿಚಾರದ ಕುರಿತು ಶೀಘ್ರದಲ್ಲಿಯೇ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ,ಜಗದೀಶ ಶೆಟ್ಟರ್,ಮತ್ತು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಭೂ ಕಬಳಿಕೆಯ ಹಗರಣದ ಬಗ್ಗೆ ಮಾಹಿತಿ ನೀಡಿ ಈ ಹಗರಣ ಡೈರಿ ಹಗರಣ ಕ್ಕಿಂತಲೂ ಭಯಾನಕ ಎನ್ನುವದನ್ನು ಮನವರಿಕೆ ಮಾಡಿಕೊಡುತ್ರೇನೆ ಎಂದು ಶಂಕರ ಮುನವಳ್ಳಿ ತಿಳಿಸಿದರು
೨೦೦೬ ರಲ್ಲಿ ಆಗಿನ ಜಿಲ್ಲಾಧಿಕಾರಿ ಶಾಲಿನಿ ರಜನೀಶ ಚರ್ಚ ಬಳಿಯ ತಮಗೆ ಸೇರಿರುವ ಜಾಗ ಸಿಟಿ ಸರ್ವೆಯಲ್ಲಿ ಬರುತ್ತದೆ ಎಂದು ಪ್ರಮಾಣ ಪತ್ರ ನೀಡಿ ಜಾಗೆ ಮಾರಾಟಕ್ಕೂ ಅನುಮತಿ ನೀಡಿದ್ದರು ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಿಯ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಇದು ಕೃಷಿ ಜಮೀನು ಎಂದು ಸಾಭೀತು ಮಾಡಲು ಹೊರಟಿದ್ದು ಇವರ ವಿರುದ್ಧ ಲೋಕಾಯುಕ್ತರ ಬಳಿ ದೂರು ದಾಖಲಿಸುವದಾಗಿ ಶಂಕರ ಮುನವಳ್ಳಿ ಎಚ್ಚರಿಕೆ ನೀಡಿದರು
ತಮ್ಮ ಬಳಿ ನ್ಯಾಯಾಲಯದ ಆದೇಶವಿದೆ ಈ ಆದೇಶದ ಪ್ರಕಾರ ಪೋಲೀಸ್ ಇಲಾಖೆಗೆ ಹಣ ಪಾವತಿಸಿ ಪೋಲೀಸ್ ಬಂದೋಬಸ್ತಿಯ ರಕ್ಷಣೆ ಪಡೆದು ತಮಗೆ ಸೇರಿದ ಜಾಗೆಯಲ್ಲಿ ಚಟುವಟಿಕೆ ನಡೆಸಿದ್ದೆನೆ ಅಧಿಕಾರಿಗಳ ಮೂಲಕ ಆಧಾರ ರಹಿತ ಪತ್ರಗಳನ್ನು ಬರೆಯಿಸಿ ತಮಗೆ ಸೇರಿದ ಭೂಮಿಯನ್ನು ಕಬಳಿಸಲು ಸಾಧ್ಯವಿಲ್ಲ ಎಂದರು