ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ಪಾಲಿಕೆ ಆಯುಕ್ತರ ಜವಾಬ್ದಾರಿಯ ಜೊತೆಗೆ ಸ್ಮಾರ್ಟ್ ಸಿಟಿ ಎಂಡಿ ಯ ಜವಾಬ್ದಾರಿ ಹಾಗು ಅಪರ ಜಿಲ್ಲಾಧಿಕಾರಿಗಳ ಚಾರ್ಜ ನೀಡಲಾಗಿದೆ
ಸ್ಮಾರ್ಟ್ ಸಿಟಿ ಎಂಡಿ ಜಿಯಾವುಲ್ಲಾ ಒಂದು ತಿಂಗಳ ಕಾಲ ರಜೆ ಮೇಲೆ ತೆರಳಿದ್ದು ಈ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲಿಯೇ ಈಗ ಅಪರ ಜಿಲ್ಲಾಧಿಕಾರಿಗಳು ಜನೇವರಿ ಹತ್ತರವರೆಗೆ ರಜೆ ಮೇಲೆ ತೆರಳಿರುವದರಿಂದ ಈ ಹುದ್ದೆಯ ಜವಾಬ್ದಾರಿ ಯನ್ನು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ವಹಿಸಲಾಗಿದೆ
ಪಾಲಿಕೆ ಆಯುಕ್ತರ ಫುಲ್ ಚಾರ್ಜ್ ಜೊತೆಗೆ ಶಶಿಧರ ಅವರು ಸ್ಮಾರ್ಟ್ ಸಿಟಿ ಎಂಡಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಹುದ್ದೆಯ ಇನ್ ಚಾರ್ಜ ಆಗಿದ್ದಾರೆ ಹೊಸ ವರ್ಷದ ಹೊಸ್ತಿಲಲ್ಲಿ ಶಶಿಧರ ಕುರೇರ ಅವರು ಡಬಲ್ ಅಲ್ಲ ತ್ರಿಬಲ್ ಹುದ್ದೆಗಳ ಇನ್ ಚಾರ್ಜ ಪಡೆದು ಟ್ರಬಲ್ ಶೂಟರ್ ಆಗಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ